ಎಫ್-15 ಯುದ್ಧ ವಿಮಾನಗಳ ಬೆಂಗಾವಲು
ಜೆಡ್ಡಾ: ಸೌದಿ ಅರೇಬಿಯಾಕ್ಕೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಗೌರವದ ಮೂಲಕ ಬರಮಾಡಿಕೊಳ್ಳಲಾಯಿತು.
ಸೌದಿ ವಾಯುಪ್ರದೇಶದಲ್ಲಿ ರಾಯಲ್ ಸೌದಿ ವಾಯುಪಡೆಯ ಎಫ್-15 ಯುದ್ಧ ವಿಮಾನಗಳು ಪ್ರಧಾನಿ ಮೋದಿಯ ವಿಮಾನಕ್ಕೆ ಬೆಂಗಾವಲಾಗಿ ಚಲಿಸಿದವು. ಆ ಮೂಲಕ ವಿಶೇಷ ಗೌರವನ್ನು ಸಲ್ಲಿಸಿತು.
ಈ ಸಂಬಂಧ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಬಳಿಕ ಜೆಡ್ಡಾದ ಅಬ್ದುಲ್ ಅಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸಕಲ ಗೌರವದೊಂದಿಗೆ ಸ್ವಾಗತಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.