ADVERTISEMENT

ಇಂದು ಎರಡನೇ ಜಾಗತಿಕ ಕೋವಿಡ್ ಸಮಾವೇಶ: ಪ್ರಧಾನಿ ಮೋದಿ, ಜೋ ಬೈಡನ್ ಭಾಗಿ

ಪಿಟಿಐ
Published 12 ಮೇ 2022, 2:17 IST
Last Updated 12 ಮೇ 2022, 2:17 IST
ಜೋ ಬೈಡನ್ ಹಾಗೂ ನರೇಂದ್ರ ಮೋದಿ
ಜೋ ಬೈಡನ್ ಹಾಗೂ ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮೇ 12) ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಎರಡನೇ ಜಾಗತಿಕ ಕೋವಿಡ್ ಸಮಾವೇಶದ ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಭೆ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆ ನಂತರ ಆರಂಭವಾಗುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.ನರೇಂದ್ರ ಮೋದಿ ಕಳೆದ 2022 ರ ಸೆಪ್ಟೆಂಬರ್ 22 ರಂದು ನಡೆದಿದ್ದ ಮೊದಲ ಜಾಗತಿಕ ಕೋವಿಡ್ ಸಮಾವೇಶದಲ್ಲೂ ಪಾಲ್ಗೊಂಡಿದ್ದರು.

ಎರಡನೇ ಜಾಗತಿಕ ಕೋವಿಡ್ ಸಮಾವೇಶದಲ್ಲಿ ಕೋವಿಡ್‌ ರೂಪಾಂತರಿಗಳಿಂದ ಎದುರಾಗಿರುವ ಹೊಸ ಸವಾಲುಗಳನ್ನು ಹೇಗೆ ಎದುರಿಸುವುದು ಹಾಗೂ ವಿಶ್ವ ಆರೋಗ್ಯ ರಕ್ಷಣೆಗೆ ಮಾಡಬೇಕಿರುವ ತುರ್ತು ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ADVERTISEMENT

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದು, ಸಾಂಕ್ರಾಮಿಕ ತಡೆ ಕುರಿತ ಸಿದ್ಧತೆಗಳ ಬಗ್ಗೆ ಮಾತನಾಡಲಿದ್ದಾರೆ.ಈ ಸಭೆಯಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರೂ ಕೂಡ ಭಾಗವಹಿಸಲಿದ್ದಾರೆ.

ಏತನ್ಮಧ್ಯೆ ದೇಶದಲ್ಲಿ ಬುಧವಾರ 2,505 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 52 ಜನ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೆ ಭಾರತದಲ್ಲಿ5,22,864 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.