
ಇಸ್ತಾಂಬುಲ್: ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್‌ಗಾಗಿ 40 ನಿಮಿಷ ಕಾದರೂ, ಅನುಮತಿ ಸಿಗದ ಕಾರಣ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹತಾಶೆಯಿಂದ ನಡೆಯುತ್ತಿದ್ದ ಸಭೆಯೊಳಗೆ ನುಗ್ಗಿದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತುರ್ಕಮೆನಿಸ್ತಾನದಲ್ಲಿ ಜರುಗುತ್ತಿರುವ ಅಂತರರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಲು ರಷ್ಯಾ, ಪಾಕಿಸ್ತಾನ, ಟರ್ಕಿ, ಇರಾನ್‌ನ ನಾಯಕರು ಆಗಮಿಸಿದ್ದರು.
ಸಭೆಯಲ್ಲಿ ಪುಟಿನ್ ಹಾಗೂ ಷರೀಫ್ ನಡುವೆ ಭೇಟಿ ಮಾಡಲು ಸಮಯವನ್ನು ನಿರ್ಧರಿಸಲಾಗಿತ್ತು. ಆದರೆ ಆ ವೇಳೆಯಲ್ಲಿ ವಾದ್ಲಿಮಿರ್ ಪುಟಿನ್ ಅವರು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರ ಜೊತೆ ಸಭೆ ನಡೆಸುತ್ತಿದ್ದರು.
ಪುಟಿನ್ ಭೇಟಿಗಾಗಿ ತಮಗೆ ನೀಡಿದ್ದ ಸಮಯಕ್ಕಿಂತ 40 ನಿಮಿಷಕ್ಕೂ ಅಧಿಕ ಕಾಲ ಷರೀಪ್ ಹೊರಗಡೆಯೇ ಕಾಯ್ದರು. ಆದರೆ, ಪುಟಿನ್ ಅವರು ಎರ್ಡೋಗನ್ ಜೊತೆಯಲ್ಲೇ ಚರ್ಚೆ ಮುಂದುವರಿಸಿದ್ದರು.
ಇದರಿಂದ ಹತಾಶೆಗೊಂಡ ಷರೀಫ್, ಪುಟಿನ್ ಮತ್ತು ಎರ್ಡೋಗನ್ ಸಭೆ ನಡೆಸುತ್ತಿದ್ದ ಮುಚ್ಚಿದ ಕೊಠಡಿಯೊಳಗೆ ಅನುಮತಿಯಿಲ್ಲದೇ ನುಗ್ಗಿದ್ದಾರೆ. ನಂತರ, ಕೇವಲ 10 ನಿಮಿಷದಲ್ಲೇ ಅಲ್ಲಿಂದ ಹೊರ ಬಂದಿದ್ದಾರೆ.
ಪಾಕ್ ಪ್ರಧಾನಿಯು ಪುಟಿನ್‌ಗಾಗಿ ಕಾಯುತ್ತಿರುವ, ಹತಾಶೆಯಿಂದ ಸಭೆಯೊಳಗೆ ನುಗ್ಗಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.