ವಾರ್ಸಾ: ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ರಷ್ಯಾದ 45 ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿರುವುದಾಗಿ ಪೋಲೆಂಡ್ ಸರ್ಕಾರ ಬುಧವಾರ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಪೋಲೆಂಡ್‌ನ ಆಂತರಿಕ ಸಚಿವ ಮಾರಿಸ್ಜ್ ಕಾಮಿನ್ಸ್‌ಕಿ, ‘ರಾಜತಾಂತ್ರಿಕರಂತೆ ನಟಿಸುತ್ತಿದ್ದ 45 ರಷ್ಯಾದ ಗೂಢಚಾರರನ್ನು ಪೋಲೆಂಡ್ ಹೊರಹಾಕಿದೆ’ ಎಂದು ಬರೆದುಕೊಂಡಿದ್ದಾರೆ.
ಈ ಆರೋಪವನ್ನು ಆಧಾರರಹಿತ ಎಂದು ಪೋಲೆಂಡ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.