ADVERTISEMENT

ಉಕ್ರೇನ್‌ಗೆ ಲಿಯೊಪರ್ಡ್ ಟ್ಯಾಂಕರ್‌ ನೆರವು: ಪೋಲೆಂಡ್‌ ನಿರ್ಧಾರ

ಏಜೆನ್ಸೀಸ್
Published 23 ಜನವರಿ 2023, 12:40 IST
Last Updated 23 ಜನವರಿ 2023, 12:40 IST
ಮೇಟಸ್ಜ್‌ ಮೊರಾವಿಕಿ
ಮೇಟಸ್ಜ್‌ ಮೊರಾವಿಕಿ   

ವಾರ್ಸಾ(ಪೋಲೆಂಡ್): ಉಕ್ರೇನ್‌ಗೆ ನೂತನ ಲಿಯೊಪರ್ಡ್ ಟ್ಯಾಂಕರ್‌ಗಳನ್ನು ಕಳುಹಿಸಲು ಪೋಲೆಂಡ್ ದೇಶವು ಜರ್ಮನಿಯ ಅನುಮತಿ ಕೋರಲಿದೆ ಎಂದು ಪ್ರಧಾನಿ ಮೇಟಸ್ಜ್‌ ಮೊರಾವಿಕಿ ಅವರು ಸೋಮವಾರ ತಿಳಿಸಿದರು.

ಈ ಸಂಬಂಧ ಯಾವಾಗ ಮನವಿ ಸಲ್ಲಿಸಲಾಗುವುದು ಎಂದು ನಿರ್ದಿಷ್ಟವಾಗಿ ತಿಳಿಸಲಿಲ್ಲ. ‘ರಾಷ್ಟ್ರಗಳ ಜೊತೆಗೆ ಮೈತ್ರಿ ಸಾಧಿಸ ಬಯಸುತ್ತಿರುವ ಪೋಲೆಂಡ್ ಟ್ಯಾಂಕರ್‌ ಕಳುಹಿಸಲು ಸಿದ್ಧವಿದೆ. ಒಂದು ವೇಳೆ ಜರ್ಮನಿ ಅನುಮತಿ ನೀಡದೇ ಇದ್ದರೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಟಿ.ವಿ ವಾಹಿನಿ ಜೊತೆಗೆ ಮಾತನಾಡಿದ ಜರ್ಮನಿಯ ವಿದೇಶಾಂಗ ಸಚಿವ ಅನ್ನಲೆನಾ ಬೆರ್ಬಾಕ್‌, ಪೋಲೆಂಡ್ ಇನ್ನೂ ಔಪಚಾರಿಕವಾಗಿ ಅನುಮತಿ ಕೋರಿಲ್ಲ. ಕೇಳಿದರೂ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ‘ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.