ADVERTISEMENT

ಗಂಭೀರ ಸ್ಥಿತಿಯಲ್ಲೇ ಮುಂದುವರಿದ ಪೋಪ್ ಫ್ರಾನ್ಸಿಸ್ ಆರೋಗ್ಯ

ಪಿಟಿಐ
Published 23 ಫೆಬ್ರುವರಿ 2025, 4:03 IST
Last Updated 23 ಫೆಬ್ರುವರಿ 2025, 4:03 IST
<div class="paragraphs"><p>ಪೋಪ್ ಫ್ರಾನ್ಸಿಸ್</p></div>

ಪೋಪ್ ಫ್ರಾನ್ಸಿಸ್

   

–ರಾಯಿಟರ್ಸ್‌ ಚಿತ್ರ

ವ್ಯಾಟಿಕನ್ ಸಿಟಿ: ನ್ಯುಮೋನಿಯಾ ಮತ್ತು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ADVERTISEMENT

ಇಂದು ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅವರ ದೀರ್ಘಾವಧಿಯ ಉಸಿರಾಟದ ಸಮಸ್ಯೆಯು ಬಿಗಡಾಯಿಸಿದ್ದು, ಹೆಚ್ಚಿನ ಆಮ್ಲಜನಕ ಪೂರೈಕೆಯ ಅಗತ್ಯವಿದೆ’ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ.

ನಿನ್ನೆಗಿಂತ ಪೋಪ್ ಹೆಚ್ಚು ನೋವಿನಲ್ಲಿದ್ದಾರೆ. ಆರ್ಮ್‌ಚೇರ್‌ನಲ್ಲೇ ದಿನ ಕಳೆದಿದ್ದಾರೆ. ಇಂದು ಬೆಳಿಗ್ಗೆ ರಕ್ತಹೀನತೆಯ ಚಿಕಿತ್ಸೆಯ ಭಾಗವಾಗಿ ರಕ್ತ ವರ್ಗಾವಣೆಯನ್ನು ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ನ್ಯುಮೋನಿಯಾ ಇರುವುದರಿಂದ ಪೋಪ್ ಆಸ್ಪತ್ರೆಯಲ್ಲೇ ಉಳಿಯುತ್ತಾರೆ. ವಾರದ ಏಂಜೆಲಸ್ ಪ್ರಾರ್ಥನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.

ರೋಮ್‌ನ ಅಗೋಸ್ಟಿನೋ ಗೆಮೆಲ್ಲಿ ಪಾಲಿಕ್ಲಿನಿಕ್‌ನಲ್ಲಿ ಶನಿವಾರ ರಾತ್ರಿ ಪೋಪ್ ಚೆನ್ನಾಗಿ ನಿದ್ದೆ ಮಾಡಿದ್ದಾರೆ. ಎಷ್ಟು ಸಮಯದವರೆಗೆ ಅವರಿಗೆ ವೈದ್ಯಕೀಯ ಚಿಕಿತ್ಸೆ ಬೇಕಿದೆ ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿಲ್ಲ..

ಫ್ರಾನ್ಸಿಸ್ ಅವರಿಗೆ ಸದ್ಯ ಪ್ರಾಣಾಪಾಯ ಇಲ್ಲ ಎಂದು ಶಸ್ತ್ರಚಿಕಿತ್ಸೆ ನಡೆಸಿದ್ದ ಶಸ್ತ್ರಚಿಕಿತ್ಸಕ ಸೆರ್ಗಿಯೋ ಅಲ್ಫೈರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.