ವಾಷಿಂಗ್ಟನ್: ರಷ್ಯಾದಿಂದ ಬಹುಕೋಟಿ ಡಾಲರ್ ಮೊತ್ತದ ಕ್ಷಿಪಣಿಗಳನ್ನು ಖರೀದಿಸಿದರೆ, ಭಾರತದ ಮೇಲೆ ನಿರ್ಬಂಧ ಹೇರಬೇಕಾಗುತ್ತದೆ ಎಂದಿದ್ದ ಅಮೆರಿಕ, ಈಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿರ್ಬಂಧ ಹೇರುತ್ತೇನೆ ಎಂದಾಗಲಿ, ಹೇರುವುದಿಲ್ಲ ಎಂದಾಗಲಿ ಹೇಳಿಲ್ಲ ಎಂದು ಅಮೆರಿಕ ಸ್ಪಷ್ಟವಾಗಿ ತಿಳಿಸಿಲ್ಲ.
‘ತಂತ್ರಜ್ಞಾನ ಮತ್ತು ಇದಕ್ಕೆ ಸಂಬಂಧಿಸಿದ ವೇದಿಕೆಗಳಲ್ಲಿ ಈ ಕುರಿತು ಭಾರತ ತನ್ನ ಸ್ಪಷ್ಟ ನಿಲುವನ್ನು ಹೇಳದ ಹೊರತು, ನಿರ್ಬಂಧ ಹೇರುವ ವಿಷಯದ ಬಗ್ಗೆ ಅಮೆರಿಕವೂ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಾರದು’ ಎಂದು ಅಮೆರಿಕದ ಉನ್ನತ ರಾಯಭಾರ ಅಧಿಕಾರಿಗಳು ಹೇಳಿದ್ದಾರೆ.
ಈ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತ 2018ರಲ್ಲಿರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.