ಭಾರತ ಮತ್ತು ಪೋರ್ಚುಗಲ್ ನಡುವಿನ ರಾಜತಾಂತ್ರಿಕ ಸಂಬಂಧದ 50ನೇ ವಾರ್ಷಿಕೋತ್ಸವ ಸ್ಮರಣಾರ್ಥವಾಗಿ ವಿಶೇಷ ಅಂಚೆ ಚೀಟಿಯನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪೋರ್ಚುಗಲ್ ಅಧ್ಯಕ್ಷ ಪೋರ್ಚುಗಲ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೌಸಾ ಅವರು ಸೋಮವಾರ ಬಿಡುಗಡೆಗೊಳಿಸಿದರು
–ಪಿಟಿಐ
ಲಿಸ್ಬನ್ : ವ್ಯಾಪಾರ, ಹೂಡಿಕೆ, ಮರುಬಳಕೆ ಇಂಧನ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ಪೋರ್ಚುಗಲ್ ಸೋಮವಾರ ಸಮ್ಮತಿಸಿವೆ.
ಎರಡು ದಿನದ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದ್ವಿಪಕ್ಷೀಯ ಬಾಂಧವ್ಯ ಕುರಿತು ಪೋರ್ಚುಗಲ್‌ನ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ‘ಸೌಸಾ ಅವರೊಂದಿಗೆ ಮಾತುಕತೆ ನಡೆಸಿದರು.
ಪೋರ್ಚುಗಲ್ ಅಧ್ಯಕ್ಷರ ನಿವಸದಲ್ಲಿ ನಡೆದ ಸಭೆಯಲ್ಲಿ ಉಭಯ ದೇಶಗಳು ವಿಶ್ವಸಂಸ್ಥೆ ಹಾಗೂ ಬಹುಹಂತದ ಇತರೆ ವೇದಿಕೆಗಳಲ್ಲೂ ಪರಸ್ಪರ ಸಹಕಾರ ಬಲಪಡಿಸಲು ಸಮ್ಮತಿಸಿದವು.
ಸಮಾನ ಆಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳನ್ನು ಕುರಿತು ಚರ್ಚಿಸಿದೆವು. ಮುಖ್ಯವಾಗಿ ವಿಜ್ಞಾನ, ತಂತ್ರಜ್ಞಾನ, ಮರುಬಳಕೆ ಇಂಧನ, ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರ ಕುರಿತು ಚರ್ಚಿಸಲಾಯಿತು ಎಂದು ಮುರ್ಮು ಅವರು ತಿಳಿಸಿದರು.
ಇದೇ ವೇಳೆ ಉಭಯ ನಾಯಕರು ಒಟ್ಟಾಗಿ, ಉಭಯ ದೇಶಗಳ ನಡುವಣ ಐವತ್ತನೇ ವರ್ಷದ ಸ್ಮರಣಾರ್ಥ ಹೊರತರಲಾದ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.
ಈ ಮೂಲಕ 27 ವರ್ಷಗಳ ತರುವಾಯ ಭಾರತದ ರಾಷ್ಟ್ರಪತಿಯು ಪೋರ್ಚುಗಲ್‌ಗೆ ಭೇಟಿ ನೀಡಿದಂತಾಯಿತು. ಪೋರ್ಚುಗಲ್‌ನಲ್ಲಿ ಭಾರತದ ಮೂಲದ ಸುಮಾರು 1.25 ಲಕ್ಷ ಜನರು ವಾಸವಿದ್ದಾರೆ. .
ದುಬೈ ವರದಿ: ದುಬೈನಲ್ಲಿ ಇದೇ 23-24ರಂದು ನಡೆಯುವ ‘ಎಸ್‌ಸಿಎಂ ಮಧ್ಯಪೂರ್ವ ವ್ಯಾಪಾರ ಸಮಾವೇಶ’ದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.