ADVERTISEMENT

ಪಪುವಾ: ಸಂಸತ್ ಭವನಕ್ಕೆ ಬೆಂಕಿ

ಏಜೆನ್ಸೀಸ್
Published 19 ಆಗಸ್ಟ್ 2019, 20:16 IST
Last Updated 19 ಆಗಸ್ಟ್ 2019, 20:16 IST

ಮೆನಕ್ವಾರಿ: ಇಂಡೊನೇಷ್ಯಾದ ಪಶ್ಚಿಮ ಪಪುವಾ ಪ್ರಾಂತದಲ್ಲಿ ರಾಷ್ಟ್ರಧ್ವಜಕ್ಕೆ ಹಾನಿಮಾಡಿದ ಆರೋಪದ ಮೇಲೆ ವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ ವಿರೋಧಿಸಿ ಸಾವಿರಾರು ಪ್ರತಿಭಟನಕಾರರು ಸೋಮವಾರ ಸ್ಥಳೀಯ ಸಂಸತ್ ಭವನಕ್ಕೆ ಬೆಂಕಿ ಹಚ್ಚಿದ್ದಾರೆ.

ಪೂರ್ವ ಜಾವಾದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ರಾಷ್ಟ್ರಧ್ವಜ ಹಾಳು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಈ ಸಂಬಂಧ ವಿಚಾರಣೆಗೆ ಒಳಪಡಲು ನಿರಾಕರಿಸಿದ್ದರಿಂದ ಇಂಡೊನೇಷ್ಯಾ ಪೊಲೀಸರುಸೇನೆಯ ಬೆಂಬಲದೊಂದಿಗೆ 43 ವಿದ್ಯಾರ್ಥಿಗಳನ್ನು ಬಂಧಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.