ADVERTISEMENT

ವಲಸಿಗರ ವಿರುದ್ಧ ದಾಳಿ;‌ ಅಮೆರಿಕದಲ್ಲಿ ಭುಗಿಲೆದ್ದ ಪ್ರತಿಭಟನೆ

ಏಜೆನ್ಸೀಸ್
Published 12 ಜೂನ್ 2025, 13:29 IST
Last Updated 12 ಜೂನ್ 2025, 13:29 IST
ವಲಸಿಗರ ಬಂಧನವನ್ನು ಖಂಡಿಸಿ ಸಿಯಾಟಲ್‌ನಲ್ಲಿ ಪ್ರತಿಭಟನಕಾರರು ಬೃಹತ್‌ ಪ್ರತಿಭಟನೆ ನಡೆಸಿದರು–ಎಪಿ ಚಿತ್ರ
ವಲಸಿಗರ ಬಂಧನವನ್ನು ಖಂಡಿಸಿ ಸಿಯಾಟಲ್‌ನಲ್ಲಿ ಪ್ರತಿಭಟನಕಾರರು ಬೃಹತ್‌ ಪ್ರತಿಭಟನೆ ನಡೆಸಿದರು–ಎಪಿ ಚಿತ್ರ   

ಆಸ್ಟಿನ್‌, ಅಮೆರಿಕ: ವಲಸಿಗರ ವಿ‌ರುದ್ಧ ಅಧಿಕಾರಿಗಳು ಕೈಗೊಂಡಿರುವ ಶೋಧ ಕಾರ್ಯಾಚರಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ನ್ಯಾಷನಲ್‌ ಗಾರ್ಡ್ಸ್‌ ನಿಯೋಜಿಸಿರುವುದನ್ನು ಖಂಡಿಸಿ ವಾರಾಂತ್ಯದಲ್ಲಿ ದೇಶದಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಲು ಸಿದ್ಧತೆಗಳು ನಡೆದಿವೆ.

ಗುರುವಾರವೂ ಸಿಯಾಟಲ್‌, ‌ನ್ಯೂಯಾರ್ಕ್‌, ಸ್ಯಾನ್‌ ಅಂಟೊನಿಯೊ, ಫಿಲಡೆಲ್ಫಿಯಾ, ಸ್ಯಾನ್‌ ಫ್ರಾನ್ಸಿಸ್ಕೊ, ಷಿಕಾಗೊ, ಡೆನ್ವೇರ್‌ ಸೇರಿದಂತೆ ದೇಶದ ವಿವಿಧೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನೂರಾರು ಪ‍್ರತಿಭಟನಕಾರರನ್ನು ಬಂಧಿಸಿದ ವೇಳೆ ಪೊಲೀಸರ ಜೊತೆ ಪ್ರತಿಭಟನಕಾರರು ವಾಗ್ವಾದ ನಡೆಸಿದರು. 

ಮುಂಬರುವ ದಿನಗಳಲ್ಲಿ ಇದಕ್ಕೂ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ, ವಾಷಿಂಗ್ಟನ್‌ನಲ್ಲಿ ಶನಿವಾರ ಸೇನಾ ಪರೇಡ್‌ ಆಯೋಜಿಸಲು ಡೊನಾಲ್ಡ್‌ ಟ್ರಂಪ್‌ ಯೋಜನೆ ರೂಪಿಸಿದ್ದಾರೆ.

ADVERTISEMENT

‘ವಲಸಿಗರ ಮೇಲಿನ ಶೋಧ ಹಾಗೂ ಗಡೀಪಾರು ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ’ ಎಂದು ಟ್ರಂಪ್‌ ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.