ಬೀಜಿಂಗ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಬೀಜಿಂಗ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಚೀನಾದ 80ನೇ ವಿಜಯೋತ್ಸವದಲ್ಲಿ ಭಾಗಿಯಾಗಿರುವ ಉಭಯ ದೇಶಗಳ ನಾಯಕರು ಮಾತುಕತೆ ನಡೆಸಲಿಕ್ಕಾಗಿ ಒಂದೇ ಕಾರಿನಲ್ಲಿ ಪಯಣಿಸಿದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ಕ್ರೆಮ್ಲಿನ್ ಬುಧವಾರ ಉಲ್ಲೇಖಿಸಿದೆ.
ಕುರ್ಸ್ಕ್ ಗಡಿಯಲ್ಲಿ ಉಕ್ರೇನಿಯನ್ನರ ಆಕ್ರಮಣವನ್ನು ಹಿಮ್ಮೆಟಿಸಲು ರಷ್ಯಾ ಸೈನ್ಯದ ಜೊತೆ ಉತ್ತರ ಕೊರಿಯಾದ ಸೈನಿಕರ ಶೌರ್ಯದ ಹೋರಾಟವನ್ನು ಪುಟಿನ್ ಅವರು ಪತ್ರಕರ್ತರ ಬಳಿ ಪ್ರಶಂಸಿಸಿದರು.
ಕಿಮ್ ತನ್ನ 14 ವರ್ಷಗಳ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಪ್ರಮುಖ ಬಹುಪಕ್ಷೀಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.