ADVERTISEMENT

ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಕ್ವಾಡ್ ದೇಶಗಳ ಶೃಂಗಸಭೆ

ಎಎಫ್‌ಪಿ
Published 26 ಏಪ್ರಿಲ್ 2023, 2:58 IST
Last Updated 26 ಏಪ್ರಿಲ್ 2023, 2:58 IST
ಆ್ಯಂಟನಿ ಅಬ್ಬೆನೀಸ್‌
ಆ್ಯಂಟನಿ ಅಬ್ಬೆನೀಸ್‌    

ಕ್ಯಾನ್‌ಬೆರಾ: ಇದೇ ಮೊದಲ ಬಾರಿಗೆ ಕ್ವಾಡ್ ಶೃಂಗಸಭೆಗೆ ಆಸ್ಟ್ರೇಲಿಯಾ ಅತಿಥ್ಯ ವಹಿಸಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಬ್ಬೆನೀಸ್‌ ತಿಳಿಸಿದ್ದಾರೆ.

ಕ್ವಾಡ್ ಭದ್ರತಾ ಶೃಂಗಸಭೆಯು ಮೇ 24ರಂದು ಸಿಡ್ನಿಯಲ್ಲಿ ಆಯೋಜನೆಯಾಗಲಿದೆ.

ಈ ಕುರಿತು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಬ್ಬೆನೀಸ್‌ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ADVERTISEMENT

ಮುಂದಿನ ತಿಂಗಳು ಕ್ವಾಡ್ ದೇಶಗಳ ಭದ್ರತಾ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಭಾರತ ಹಾಗೂ ಜಪಾನ್‌ ದೇಶಗಳ ನಾಯಕರಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.