ADVERTISEMENT

ಮಹಾರಾಷ್ಟ್ರ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪ: ವಿದೇಶದಲ್ಲಿ ರಾಹುಲ್ ಆರೋಪ

ಪಿಟಿಐ
Published 21 ಏಪ್ರಿಲ್ 2025, 7:55 IST
Last Updated 21 ಏಪ್ರಿಲ್ 2025, 7:55 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಬೋಸ್ಟನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಚುನಾವಣಾ ಆಯೋಗವು ನಿಯಮಗಳಲ್ಲಿ ರಾಜಿ ಮಾಡಿಕೊಂಡಿದೆ ಮತ್ತು ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ಅವರು ಅಮೆರಿಕಕ್ಕೆ ಆಗಮಿಸಿದ ರಾಹುಲ್‌ ಗಾಂಧಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿರುವ ವಯಸ್ಕರಿಗಿಂತ ಹೆಚ್ಚಿನವರು ಮತದಾನ ಮಾಡಿದ್ದಾರೆ ಎಂದು ಆರೋಪಿಸಿದರು. ಆಯೋಗ ನಮಗೆ ಸಂಜೆ 5.30ರ ಹೊತ್ತಿಗೆ ಮತದಾನದ ಅಂಕಿ ಅಂಶವನ್ನು ನೀಡಿತ್ತು. ಆದರೆ 5.30ರಿಂದ 7.30ರವರೆಗೆ 65 ಲಕ್ಷ ಮತದಾರರು ಮತಚಲಾಯಿಸಿದ್ದಾರೆ. ಇದು ಭೌತಿಕವಾಗಿ ಅಸಾಧ್ಯವಾಗಿದೆ. ಒಬ್ಬ ಮತದಾರ ಮತ ಹಾಕಲು 3 ನಿಮಿಷವಾದರೂ ಬೇಕು. ಒಂದು ವೇಳೆ ಅವರು ಹೇಳಿದಂತೆ 65 ಲಕ್ಷ ಜನ ಮತಚಲಾಯಿಸಿದ್ದರೆ, ಮತದಾರರ ಸರತಿ ಸಾಲು ಬೆಳಗಿನ ಜಾವ 2 ಗಂಟೆಯವರೆಗೂ ಇರಬೇಕಿತ್ತು.

ADVERTISEMENT

ಆಯೋಗಕ್ಕೆ ಆ ಸಮಯದ ವಿಡಿಯೊವನ್ನು ಕೇಳಿದರೆ, ಅವರು ನಿರಾಕರಿಸಿದ್ದರು. ಅಲ್ಲದೆ ಕಾನೂನನ್ನು ಸಹ ಬದಲಾಯಿಸಿದ್ದರು. ಆದ್ದರಿಂದ ಈಗ ನಾವು ವಿಡಿಯೊವನ್ನು ಕೇಳಲು ಸಾಧ್ಯವಿಲ್ಲ. ಇದರಿಂದ  ಚುನಾವಣಾ ಆಯೋಗ ರಾಜಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ, ವ್ಯವಸ್ಥೆಯಲ್ಲೂ ಏನೋ ತಪ್ಪಾಗಿದೆ ಎಂದು ಹಲವು ಬಾರಿ ಉಚ್ಚರಿಸಿದ್ದೇನೆ’ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರು ಇಂದು ಮತ್ತು ನಾಳೆ ಬ್ರೌನ್‌ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.