ADVERTISEMENT

ಮಸಾಜ್‌ ಪಾರ್ಲರ್‌ ಮೇಲೆ ಗುಂಡಿನ ದಾಳಿ: ಅಟ್ಲಾಂಟಾದ ಹಲವೆಡೆ ಪ್ರತಿಭಟನೆ

ಏಜೆನ್ಸೀಸ್
Published 21 ಮಾರ್ಚ್ 2021, 7:11 IST
Last Updated 21 ಮಾರ್ಚ್ 2021, 7:11 IST
ಅಟ್ಲಾಂಟಾದ ಜಾರ್ಜಿಯಾ ಸ್ಟೇಟ್‌ ಕ್ಯಾಪಿಟಲ್‌ ಬಳಿ ಮಸಾಜ್‌ ಪಾರ್ಲರ್‌ ಗುಂಡಿನ ದಾಳಿಯನ್ನು ಖಂಡಿಸಿ ಶನಿವಾರ ಹಲವಾರು ಮಂದಿ ಪ್ರತಿಭಟಿಸಿದರು      –ಎ‍ಪಿ/ಪಿಟಿಐ ಚಿತ್ರ
ಅಟ್ಲಾಂಟಾದ ಜಾರ್ಜಿಯಾ ಸ್ಟೇಟ್‌ ಕ್ಯಾಪಿಟಲ್‌ ಬಳಿ ಮಸಾಜ್‌ ಪಾರ್ಲರ್‌ ಗುಂಡಿನ ದಾಳಿಯನ್ನು ಖಂಡಿಸಿ ಶನಿವಾರ ಹಲವಾರು ಮಂದಿ ಪ್ರತಿಭಟಿಸಿದರು      –ಎ‍ಪಿ/ಪಿಟಿಐ ಚಿತ್ರ   

ಅಟ್ಲಾಂಟಾ(ಅಮೆರಿಕ): ಮಸಾಜ್‌ ಪಾರ್ಲರ್ ಮೇಲೆ‌ ಇತ್ತೀಚೆಗೆ ನಡೆದ ದಾಳಿಯನ್ನು ಖಂಡಿಸಿ ಶನಿವಾರ ಅಟ್ಲಾಂಟಾದ ಹಲವೆಡೆ ಪ್ರತಿಭಟನೆಗಳು ನಡೆಯಿತು.

‘ಜಾರ್ಜಿಯಾ ಸ್ಟೇಟ್‌ ಕ್ಯಾಪಿಟಲ್‌ ಬಳಿ ಸೇರಿದ ವಿವಿಧ ಸಮುದಾಯ ಜನರು ವರ್ಣ ಮತ್ತು ಜನಾಂಗೀಯ ಬೇಧದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ನಮಗೆ ನ್ಯಾಯ ಸಿಗಬೇಕು’ ಎಂದು ಆಗ್ರಹಿಸಿದರು.

ಅಟ್ಲಾಂಟಾದ ಲಿಬರ್ಟಿ ಪ್ಲಾಜಾದ ಬಳಿಯೂ ನೂರಾರು ಪ್ರತಿಭಟನಕಾರರು ಸೇರಿದ್ದರು. ಶನಿವಾರ ಅಟ್ಲಾಂಟಾದೆಲ್ಲೆಡೆ ಈ ರೀತಿಯ ಹಲವು ರ‍್ಯಾಲಿಗಳು ನಡೆದಿದ್ದು, ಈ ವೇಳೆ ಜನರು ಜನಾಂಗೀಯ ದೌರ್ಜನ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಸಂಸದರಾದ ರಾಫೆಲ್ ವಾರ್ನಾಕ್, ಜಾನ್ ಒಸಾಫ್ ಮತ್ತು ಜಾರ್ಜಿಯಾದ ಪ್ರತಿನಿಧಿ ವಿಯೆಟ್ಲಾಮೀಸ್‌ ಅಮೆರಿಕನ್‌ ಬೀ ನ್ಗುಯೆನ್‌ಗೆ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

‘ನನ್ನ ಏಷ್ಯಾದ ಸಹೋದರ, ಸಹೋದರಿಯರೇ ನಾವು ನಿಮ್ಮೊಂದಿಗೆ ಇದ್ದೇವೆ’ ಎಂದು ರಾಫೆಲ್ ವಾರ್ನಾಕ್ ಅವರು ಹೇಳಿದರು.

ಅಟ್ಲಾಂಟಾದ ಎರಡು ಮಸಾಜ್‌ ಪಾರ್ಲರ್‌ಗಳು ಮತ್ತು ಉಪನಗರಗಳಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಏಷ್ಯಾ ಮೂಲದ ಆರು ಮಹಿಳೆಯರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು. ಶ್ವೇತ ವರ್ಣೀಯ ರಾಬರ್ಟ್‌ ಅರೋನ್‌ ಲಾಂಗ್‌ ಈ ದಾಳಿ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.