ADVERTISEMENT

ವಾಗ್ದಂಡನೆ: ಟ್ರಂಪ್‌ ವಿರುದ್ಧ ಟೆಮಾಕ್ರಟ್‌ರಿಂದ ಆರೋಪ ನಿಗದಿ

ಏಜೆನ್ಸೀಸ್
Published 10 ಡಿಸೆಂಬರ್ 2019, 20:00 IST
Last Updated 10 ಡಿಸೆಂಬರ್ 2019, 20:00 IST
   

ವಾಷಿಂಗ್ಟನ್‌: ವಾಗ್ದಂಡನೆ ವಿಚಾರಣೆ ಎದುರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಡೆಮಾಕ್ರಟಿಕ್‌ ಪಕ್ಷದ ಸಂಸದರು ಮಂಗಳವಾರ ಎರಡು ಆರೋಪಗಳನ್ನು ಹೊರಿಸಿದ್ದಾರೆ.

‘ಅಧ್ಯಕ್ಷರಿಗಿರುವ ಅಧಿಕಾರವನ್ನು ಟ್ರಂಪ್‌ ದುರುಪಯೋಗಪಡಿಸಿಕೊಂಡಿದ್ದಾರೆ. ತಮ್ಮ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ’ ಎಂದು ಇತ್ತೀಚೆಗೆ ಡೆಮಾಕ್ರಟಿಕ್‌ ಸಂಸದರು ವಾದ ಮಂಡಿಸಿದ್ದ ಬೆನ್ನಲ್ಲೇ, ಈಗ ಆರೋಪಗಳನ್ನು ಹೊರಿಸಿದ್ದಾರೆ.

ಮುಂದಿನ ವಾರ ವಾಗ್ದಂಡನೆ ವಿಚಾರಣೆಯನ್ನು ಸಂಸತ್‌ನಲ್ಲಿ ಮತಕ್ಕೆ ಹಾಕಲಾಗುತ್ತದೆ. ಒಂದು ವೇಳೆ ಈ ಆರೋಪಗಳು ಸಾಬೀತಾದರೆ, ಟ್ರಂಪ್‌ ಅವರು ವಾಗ್ದಂಡನೆಗೆ ಒಳಗಾಗಿ ಸೆನೆಟ್‌ನಲ್ಲಿ ವಿಚಾರಣೆ ಎದುರಿಸುವ ಅಮೆರಿಕದ ಮೂರನೇ ನಾಯಕ ಎನಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.