ಬ್ಯಾಂಕಾಕ್: ಮಾನವ ಕಳ್ಳಸಾಗಣೆಗೆ ಒಳಗಾಗಿ, ಮ್ಯಾನ್ಮಾರ್‌ನಲ್ಲಿ ಆನ್‌ಲೈನ್ ಮೂಲಕ ವಂಚನೆಯಲ್ಲಿ ನಿರತ ಕೇಂದ್ರಗಳಲ್ಲಿ ಕೆಲಸಕ್ಕೆ ಸೇರಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿ, ಮರಳಿ ತಾಯ್ನಾಡಿಗೆ ಕಳುಹಿಸಲಾಗಿದೆ ಎಂದು ಥಾಯ್ಲೆಂಡ್ ಸೇನೆ ಗುರುವಾರ ಹೇಳಿದೆ.
ಭಾರತೀಯರು ಸೇರಿದಂತೆ 260 ಜನರನ್ನು ರಕ್ಷಿಸಲಾಗಿದೆ. ಇವರನ್ನು ಮ್ಯಾನ್ಮಾರ್‌ನಲ್ಲಿ ರಕ್ಷಿಸಿ, ಥಾಯ್ಲೆಂಡ್‌ಗೆ ಕಳುಹಿಸಲಾಗಿತ್ತು.
45 ಸಾವಿರದಷ್ಟು ಚೀನಿ ಪ್ರಜೆಗಳು ಇಂತಹ ವಂಚನೆ ಜಾಲಗಳನ್ನು ನಡೆಸುತ್ತಿದ್ದರು ಎಂದು ಶಂಕಿಸಲಾಗಿದ್ದು, ಇವರನ್ನು ಸಹ ಚೀನಾಕ್ಕೆ ಮರಳಿ ಕಳುಹಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.