ADVERTISEMENT

ಅಲಾಸ್ಕ: ಹೆಲಿಕಾಪ‍್ಟರ್‌ ಪತನ– ಜೆಕ್‌ನ ಶ್ರೀಮಂತ ಉದ್ಯಮಿ ಸೇರಿ ಐವರು ಸಾವು

ಏಜೆನ್ಸೀಸ್
Published 29 ಮಾರ್ಚ್ 2021, 11:18 IST
Last Updated 29 ಮಾರ್ಚ್ 2021, 11:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಂಕರೇಜ್‌, ಅಮೆರಿಕ: ಅಲಾಸ್ಕದಲ್ಲಿ ಹೆಲಿಕಾಪ್ಟರ್‌ ಪತನವಾಗಿದ್ದು, ಪೈಲಟ್‌ ಸೇರಿ ಐವರು ಮೃತಪಟ್ಟಿದ್ದಾರೆ.

ಮೃತರಲ್ಲಿ ಜೆಕ್‌ ರಿಪಬ್ಲಿಕ್‌ನ ಶ್ರೀಮಂತ ವ್ಯಕ್ತಿಯೂ ಸೇರಿದ್ದಾರೆ. ಈ ಅಪಘಾತದಲ್ಲಿ ಬದುಳಿದಿರುವ ಏಕೈಕ ವ್ತಕ್ತಿಯನ್ನು ಅಂಕರೇಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಆರೋಗ್ಯ ಗಂಭೀರವಾಗಿದ್ದರೂ, ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮೂವರು ಪ್ರವಾಸಿಗರು ಹಾಗೂ ಇಬ್ಬರು ಗೈಡ್‌ಗಳನ್ನು ಹೊತ್ತ ಹೆಲಿಕಾಪ್ಟರ್‌ ಟೋರ್ಡ್ರಿಲ್ಲೊ ಮೌಂಟೇನ್‌ ಲಾಜ್‌ನಿಂದ ಶನಿವಾರ ಪ್ರಯಾಣ ಬೆಳೆಸಿತ್ತು. ಕೆಲವೇ ಹೊತ್ತಿನ ನಂತರ ಈ ಅಪಘಾತ ಸಂಭವಿಸಿತು ಎಂದು ಮೂಲಗಳು ಹೇಳಿವೆ.

ADVERTISEMENT

ಮೃತರಾದ ಜೆಕ್‌ ಪ್ರಜೆ, ಪೀಟರ್‌ ಕೆಲ್ನರ್ ಶ್ರೀಮಂತ ಉದ್ಯಮಿ. ಅವರ ಆಸ್ತಿ ಮೌಲ್ಯ 17 ಶತಕೋಟಿ ಡಾಲರ್‌ ಇದ್ದು, ಫೋಬ್ಸ್‌ ಸಿದ್ಧಪಡಿಸಿದ್ದ 2020ನೇ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಇವರ ಹೆಸರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.