ADVERTISEMENT

ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ: ಬ್ರಿಟನ್, ಫ್ರಾನ್ಸ್‌ ವಿರುದ್ಧ ರಷ್ಯಾ ಆರೋಪ

ಪಿಟಿಐ
Published 24 ಫೆಬ್ರುವರಿ 2026, 16:25 IST
Last Updated 24 ಫೆಬ್ರುವರಿ 2026, 16:25 IST
   

ಮಾಸ್ಕೊ: ಬ್ರಿಟನ್‌ ಮತ್ತು ಫ್ರಾನ್ಸ್ ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ ವರ್ಗಾಯಿಸಲು ಯತ್ನಿಸುತ್ತಿವೆ ಎಂದು ರಷ್ಯಾದ ಗುಪ್ತಚರ ಸಂಸ್ಥೆ ಹೇಳಿದೆ.

ರಷ್ಯಾದ ಮಿಲಿಟರಿ ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ, ರಷ್ಯಾದ ವಿದೇಶಿ ಗುಪ್ತಚರ ಸಂಸ್ಥೆಯ (ಎಸ್‌ವಿಆರ್‌) ವರದಿಯನ್ನು ಉಲ್ಲೇಖಿಸಿದೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ.   

ಬ್ರಿಟನ್‌ ಮತ್ತು ಫ್ರಾನ್ಸ್‌ನ ರಹಸ್ಯ ಕಾರ್ಯಾಚರಣೆಯು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಆಗಿದೆ. ಇದು ಜಾಗತಿಕ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ವಿರುದ್ಧವಾಗಿದೆ ಎಂದು ಎಂದು ಎಸ್‌ವಿಆರ್‌ ಹೇಳಿದೆ. 

ADVERTISEMENT

ರಷ್ಯಾ– ಉಕ್ರೇನ್‌ ಕದನ ವಿರಾಮ ಘೋಷಣೆಯಲ್ಲಿ ‘ಅಣ್ವಸ್ತ್ರ ರಹಿತ ಉಕ್ರೇನ್‌’ ಒಪ್ಪಂದವೂ ಪ್ರಮುಖವಾಗಿದೆ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.