ADVERTISEMENT

ಉಕ್ರೇನ್‌ನ ಡಾನ್ಯೂಬ್ ಪ್ರದೇಶದಲ್ಲಿನ ಧಾನ್ಯ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ

ರಾಯಿಟರ್ಸ್
Published 23 ಆಗಸ್ಟ್ 2023, 5:34 IST
Last Updated 23 ಆಗಸ್ಟ್ 2023, 5:34 IST

ಚಿತ್ರಕೃಪೆ: ರಾಯಿಟರ್ಸ್
    ಚಿತ್ರಕೃಪೆ: ರಾಯಿಟರ್ಸ್

ಕೀವ್‌: ಉಕ್ರೇನ್‌ನ ದಕ್ಷಿಣದ ಬಂದರು ನಗರ ಒಡೆಸಾ ಮತ್ತು ಡಾನ್ಯೂಬ್ ನದಿ ತೀರ ಪ್ರದೇಶಗಳಲ್ಲಿರುವ ಪ್ರಮುಖ ಧಾನ್ಯ ಮೂಲಸೌಕರ್ಯಗಳ ರಷ್ಯಾ ಸೇನೆ ಮಂಗಳವಾರ ರಾತ್ರಿ ಡ್ರೋನ್‌ ದಾಳಿ ನಡೆಸಿದೆ.

ಉಕ್ರೇನ್‌ ಸೇನೆ ಮತ್ತು ಸ್ಥಳೀಯ ಆಡಳಿತ ಈ ಬಗ್ಗೆ ಬುಧವಾರ ಹೇಳಿಕೆ ನೀಡಿವೆ.

'ಡಾನ್ಯೂಬ್ ಪ್ರಾಂತ್ಯದಲ್ಲಿರುವ ಧಾನ್ಯ ಸಂಗ್ರಹ ಮೂಲಸೌಕರ್ಯ, ಉದ್ಪಾದನೆ ಮತ್ತು ಸರಬರಾಜು ಕೇಂದ್ರಗಳ ಮೇಲೆ ಶತ್ರು ಪಡೆಗಳು ದಾಳಿ ಮಾಡಿವೆ. ಇದರಿಂದ ಬೆಂಕಿ ಆವರಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ' ಎಂದು ಸೇನೆಯು ಟೆಲಿಗ್ರಾಮ್‌ ಮೂಲಕ ಮಾಹಿತಿ ನೀಡಿದೆ.

ADVERTISEMENT

ರಷ್ಯಾ ಸೇನಾ ಪಡೆಗಳು ಕಳೆದ ವರ್ಷ ಫೆಬ್ರುವರಿಯಿಂದಲೂ ಉಕ್ರೇನ್‌ನಲ್ಲಿ ಆಕ್ರಮಣ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.