ADVERTISEMENT

ರಷ್ಯಾದಿಂದ ಡ್ರೋನ್‌ ದಾಳಿ: ತ್ವರಿತ ರಾಜತಾಂತ್ರಿಕ ಕ್ರಮಕ್ಕೆ ಉಕ್ರೇನ್‌ ಮನವಿ

ಏಜೆನ್ಸೀಸ್
Published 27 ಜನವರಿ 2026, 15:54 IST
Last Updated 27 ಜನವರಿ 2026, 15:54 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ಕೀವ್‌: ‘ಉಕ್ರೇನ್‌ ಮೇಲೆ ಸುಮಾರು ನಾಲ್ಕು ವರ್ಷಗಳಿಂದ ರಷ್ಯಾ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸಲು ಅಮೆರಿಕ ತನ್ನ ರಾಜತಾಂತ್ರಿಕ ಕ್ರಮಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಬೇಕು’ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ.

ಉಕ್ರೇನ್‌ನ ಒಡೆಸಾ ನಗರದ ಮೇಲೆ ರಷ್ಯಾ 50ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ಬಾಂಬ್‌ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು ಮತ್ತು ಗರ್ಭಿಣಿ ಸೇರಿದಂತೆ 23 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಝೆಲೆನ್‌ಸ್ಕಿ ಅವರು ಟೆಲಿಗ್ರಾಮ್‌ ಆ್ಯಪ್‌ ಮೂಲಕ ಮನವಿ ಮಾಡಿದ್ದಾರೆ.

‘ರಷ್ಯಾದ ಪ್ರತಿಯೊಂದು ದಾಳಿಯು ಯುದ್ಧವನ್ನು ಕೊನೆಗೊಳಿಸಲು ನಡೆಸುತ್ತಿರುವ ರಾಜತಾಂತ್ರಿಕ ಕ್ರಮಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಇದಕ್ಕಾಗಿ ಸಹಾಯ ಮಾಡುತ್ತಿರುವ ಪಾಲುದಾರ ದೇಶಗಳ ಪ್ರಯತ್ನಗಳ ಮೇಲೂ ಪರಿಣಾಮ ಬೀರುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಈ ದಾಳಿಯಲ್ಲಿ ಸುಧಾರಿತ ಡ್ರೋನ್‌ಗಳನ್ನು ರಷ್ಯಾ ಬಳಸಿದೆ. ಈ ವರ್ಷ ಚಳಿಗಾಲದಲ್ಲೇ ವಿದ್ಯುತ್‌ ಸ್ಥಾವರವನ್ನು ಗುರಿಯಾಗಿಸಿ ಪದೇ ಪದೇ ಬಾಂಬ್‌ ದಾಳಿ ನಡೆಸುತ್ತಿದೆ. ಐದು ಅಪಾರ್ಟ್‌ಮೆಂಟ್‌ ಬ್ಲಾಕ್‌ಗಳಿಗೆ ಹಾನಿಯಾಗಿದೆ. ಪ್ರೊಟೆಸ್ಟಂಟ್‌ ಕ್ರೈಸ್ತರು ಅನೌಪಚಾರಿಕವಾಗಿ ಪೂಜಿಸುವ ಸ್ಥಳಕ್ಕೂ ಹಾನಿಯಾಗಿದೆ’ ಎಂದು ಉಕ್ರೇನ್‌ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.