ADVERTISEMENT

‘ಸ್ಪುಟ್ನಿಕ್‌’ ಉತ್ಪಾದನೆಯಲ್ಲಿ ಹಿಂದೆ ಬಿದ್ದ ರಷ್ಯಾ, ಚೀನಾದ ಕಂಪನಿ ಜತೆ ಒಪ್ಪಂದ

ಏಜೆನ್ಸೀಸ್
Published 3 ಮೇ 2021, 14:54 IST
Last Updated 3 ಮೇ 2021, 14:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೈಪೆ: ಬೇಡಿಕೆಗೆ ಅನುಗುಣವಾಗಿ ‘ಸ್ಪುಟ್ನಿಕ್ ವಿ’ ಲಸಿಕೆಯನ್ನು ಪೂರೈಸಲು ಹಿಂದುಳಿದಿರುವ ರಷ್ಯಾ, ಚೀನಾದ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಲಸಿಕಾ ತಯಾರಿಕೆಯನ್ನು ಚುರುಕುಗೊಳಿಸಲು ಮುಂದಾಗಿದೆ.

ಒಟ್ಟು 26 ಕೋಟಿ ಡೋಸ್‌ ಲಸಿಕೆ ತಯಾರಿಕೆಗಾಗಿ ಚೀನಾದ ಕಂಪನಿಗಳೊಂದಿಗೆ ಮೂರು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಷ್ಯಾ ಹೇಳಿದೆ.

63 ಕೋಟಿ ಡೋಸ್‌ ‘ಸ್ಪುಟ್ನಿಕ್ ವಿ’ ಲಸಿಕೆಯನ್ನು 100ಕ್ಕೂ ಹೆಚ್ಚು ದೇಶಗಳಿಗೆ ಪೂರೈಸಲು ರಷ್ಯಾ ಒಪ್ಪಿಕೊಂಡಿದೆ. ಆದರೆ, ಇದುವರೆಗೆ ಕೇವಲ 1.5 ಕೋಟಿ ಡೋಸ್‌ಗಳನ್ನು ಮಾತ್ರವೇ ರಫ್ತು ಮಾಡಲು ಸಾಧ್ಯವಾಗಿದೆ ಎಂದು ಲಂಡನ್ ಮೂಲದ ವಿಜ್ಞಾನ ವಿಶ್ಲೇಷಣಾ ಕಂಪನಿಯಾದ ಏರ್ಫಿನಿಟಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.