ADVERTISEMENT

ಉಕ್ರೇನ್‌ ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಏಜೆನ್ಸೀಸ್
Published 27 ಆಗಸ್ಟ್ 2022, 13:55 IST
Last Updated 27 ಆಗಸ್ಟ್ 2022, 13:55 IST
ಝಪೋರಿಝಿಯಾದಲ್ಲಿರುವ ಅಣು ಸ್ಥಾವರ –ಎಎಫ್‌ಪಿ ಸಂಗ್ರಹ ಚಿತ್ರ 
ಝಪೋರಿಝಿಯಾದಲ್ಲಿರುವ ಅಣು ಸ್ಥಾವರ –ಎಎಫ್‌ಪಿ ಸಂಗ್ರಹ ಚಿತ್ರ    

ಕೀವ್‌ (ಎಪಿ): ‘ಉಕ್ರೇನ್‌ನ ಪರಮಾಣು ವಿದ್ಯುತ್‌ ಸ್ಥಾವರದ ಆಸುಪಾಸಿನಲ್ಲಿರುವ ನಗರಗಳ ಮೇಲೆ ರಷ್ಯಾ ಸೇನೆಯು ಕ್ಷಿಪಣಿ ಹಾಗೂ ಫಿರಂಗಿ ದಾಳಿ ನಡೆಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಝಪೋರಿಝಿಯಾದಲ್ಲಿರುವ ಸ್ಥಾವರವು ಯೂರೋಪ್‌ನ ಅತಿದೊಡ್ಡ ಅಣು ವಿದ್ಯುತ್‌ ಸ್ಥಾವರವೆನಿಸಿದೆ. ಇದು ನೀಪರ್‌ ನದಿ ತಟದಲ್ಲಿದೆ. ಈ ಸ್ಥಾವರದಿಂದ 10 ಕಿ.ಮೀ ದೂರದಲ್ಲಿರುವ ನಿಕೊಪಾಲ್‌ ಮತ್ತು ಮರ್ಹನೆಸ್‌ ನಗರಗಳ ಮೇಲೆ ರಷ್ಯಾ ಸೇನೆಯು ಗ್ರಾಡ್‌ ಕ್ಷಿಪಣಿಗಳು ಹಾಗೂ ಫಿರಂಗಿಗಳಿಂದ ದಾಳಿ ನಡೆಸಿದೆ’ ಎಂದು ದಿನಿಪ್ರೊಪೆತ್ರೋವ್ಸ್ಕ್ ಪ್ರದೇಶದ ಗವರ್ನರ್‌ ವ್ಯಾಲೆಂಟಿನ್‌ ರೆಜ್ನಿಚೆಂಕೊ ಶನಿವಾರ ತಿಳಿಸಿದ್ದಾರೆ.

ಬೆಂಕಿಯಿಂದಾಗಿ ಸ್ಥಾವರದಲ್ಲಿನ ವಿಕಿರಣ ಪ್ರಸರಣ ಮಾರ್ಗಕ್ಕೆ ಹಾನಿಯಾಗಿತ್ತು. ಇದರಿಂದ ಒಂದೊಮ್ಮೆ ವಿಕಿರಣ ಸೋರಿಕೆಯಾದರೆ ಉಂಟಾಗಬಹುದಾದ ಅಪಾಯ ತಪ್ಪಿಸುವ ಉದ್ದೇಶದಿಂದ ಅಧಿಕಾರಿಗಳು ಸ್ಥಾವರದ ಸನಿಹ ವಾಸವಿರುವವರಿಗೆ ಶುಕ್ರವಾರ ಅಯೋಡಿನ್‌ ಮಾತ್ರೆಗಳನ್ನು ವಿತರಿಸಿದ್ದರು.

ADVERTISEMENT

‘ಬಖಮತ್‌ ನಗರದ ಕೆಲ ಪ್ರದೇಶಗಳ ಮೇಲೆ ಹಿಡಿತ ಸಾಧಿಸುವ ಸಲುವಾಗಿ ರಷ್ಯಾ ಸೇನೆ ಹಾಗೂ ಪ್ರತ್ಯೇಕತಾವಾದಿಗಳ ಪಡೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ’ ಎಂದು ಪೂರ್ವ ಡೊನೆಸ್ಕ್‌ ಪ್ರದೇಶದ ಗವರ್ನರ್‌ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.