ADVERTISEMENT

ಪುಟಿನ್ ಆಪ್ತನ ಮಗಳು ಡೇರಿಯಾ ಡುಗಿನಾ ಕೊಲೆ ಮಾಡಿಸಿದ್ದು ಉಕ್ರೇನ್: ರಷ್ಯಾ ಆರೋಪ

ಏಜೆನ್ಸೀಸ್
Published 22 ಆಗಸ್ಟ್ 2022, 14:00 IST
Last Updated 22 ಆಗಸ್ಟ್ 2022, 14:00 IST
ಡೇರಿಯಾ ಡುಗಿನಾ
ಡೇರಿಯಾ ಡುಗಿನಾ   

ಮಾಸ್ಕೊ: ‘ರಷ್ಯಾದ ರಾಷ್ಟ್ರವಾದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಆಪ್ತಅಲೆಕ್ಸಾಂಡರ್ ಡುಗಿನಾ ಮಗಳು ಡೇರಿಯಾ ಡುಗಿನಾ ಅವರ ಹತ್ಯೆಯನ್ನು ಉಕ್ರೇನ್‌ನ ಗುಪ್ತಚರ ಸಂಸ್ಥೆಗಳೇ ಆಯೋಜಿಸಿವೆ’ ಎಂದು ರಷ್ಯಾದ ಉನ್ನತ ಗುಪ್ತಚರ ಸಂಸ್ಥೆಯು ಸೋಮವಾರ ಆರೋಪಿಸಿದೆ.

ರಷ್ಯಾದ ಪ್ರಮುಖ ರಕ್ಷಣಾ ಏಜೆನ್ಸಿ ಕೆಜಿಬಿಯ ಭಾಗವಾಗಿರುವ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್‌ಎಸ್‌ಬಿ), ‘ಡೇರಿಯಾ ಡುಗಿನಾ ಅವರ ಹತ್ಯೆಯನ್ನು ಉಕ್ರೇನ್‌ನ ವಿಶೇಷ ಸೇವಾ ಸಿಬ್ಬಂದಿಯಿಂದ ಸಿದ್ಧಪಡಿಸಿ, ಕಾರ್ಯರೂಪಕ್ಕೆ ತರಲಾಗಿದೆ. ಹತ್ಯೆ ನಡೆದ ಬಳಿಕ ಉಕ್ರೇನ್‌ನ ಪ್ರಜೆ ರಷ್ಯಾವನ್ನು ತೊರೆದಿದ್ದಾಳೆ’ ಎಂದು ಹೇಳಿದೆ.

ಉಕ್ರೇನ್ ಪ್ರಜೆ ನಟಾಲಿಯಾ ವೋವ್ಕ್ ಎಂಬಾಕೆ ಹತ್ಯೆ ಮಾಡಿರಬಹುದು ಎಂದು ಎಫ್‌ಎಸ್‌ಬಿ ಶಂಕೆ ವ್ಯಕ್ತಪಡಿಸಿದೆ.ಈ ಹಿಂದೆ ಹತ್ಯೆಯನ್ನು ತನ್ನ ಕೈವಾಡ ಇರುವುದನ್ನು ಉಕ್ರೇನ್ ನಿರಾಕರಿಸಿತ್ತು.

ADVERTISEMENT

‘ಡೇರಿಯಾ ಡುಗಿನಾ ಇದ್ದ ವಸತಿಸಂಕೀರ್ಣದಲ್ಲೇ ಅಪಾರ್ಟ್‌ವೊಂದರಲ್ಲಿ ನಟಾಲಿಯಾ ಬಾಡಿಗೆಗಿದ್ದಳು. ಡೇರಿಯಾ ಅವರನ್ನು ಹಿಂಬಾಲಿಸುತ್ತಿದ್ದಳು’ ಎಂದೂ ಎಫ್‌ಎಸ್‌ಬಿ ವಿವರ ನೀಡಿದೆ.

ಮಾಸ್ಕೊದ ಹೊರವಲಯದಲ್ಲಿ ಭಾನುವಾರ ಸಂಭವಿಸಿದ ಕಾರ್‌ ಬಾಂಬ್ ಸ್ಫೋಟದಲ್ಲಿ ಡೇರಿಯಾ ಡುಗಿನಾ ಸಾವಿಗೀಡಾಗಿದ್ದರು.ಅಲೆಕ್ಸಾಂಡರ್ ಡುಗಿನಾ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆಪ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.