ADVERTISEMENT

ಡ್ರೋನ್‌ ದಾಳಿ: ರಷ್ಯಾದ ಪ್ರಮುಖ ತೈಲ ಘಟಕ ಸ್ಫೋಟ

ಉಕ್ರೇನ್‌ನ 361 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ: ರಷ್ಯಾ

ಏಜೆನ್ಸೀಸ್
Published 14 ಸೆಪ್ಟೆಂಬರ್ 2025, 15:51 IST
Last Updated 14 ಸೆಪ್ಟೆಂಬರ್ 2025, 15:51 IST
..
..   

ಮಾಸ್ಕೊ: ಉಕ್ರೇನ್‌ನ 361 ಡ್ರೋನ್‌ಗಳು ರಷ್ಯಾದ ಮೇಲೆ ದಾಳಿ ನಡೆಸಿದ್ದು. ಅಲ್ಲಿನ ಬೃಹತ್‌ ತೈಲ ಸಂಸ್ಕರಣಾ ಘಟಕವೊಂದು ಹೊತ್ತಿ ಉರಿದಿದೆ. 

ರಷ್ಯಾದ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿರುವುದನ್ನು ದೃಢಪಡಿಸಿರುವ ಉಕ್ರೇನ್‌ನ ಡ್ರೋನ್‌ ಕಮಾಂಡ್‌, ‘ನಮ್ಮ ದಾಳಿ ಯಶಸ್ವಿಯಾಗಿದೆ’ ಎಂದು ಹೇಳಿದ್ದಾರೆ.

‘ಕಿರಿಷಿ ಪ್ರದೇಶದಲ್ಲಿ ಶನಿವಾರ ರಾತ್ರಿ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಅವುಗಳ ಅವಶೇಷಗಳಿಂದಾಗಿ ಬೆಂಕಿ ಹತ್ತಿದೆ. ಯಾರಿಗೂ ಗಾಯವಾಗಿಲ್ಲ’ ಎಂದು ಪ್ರಾದೇಶಿಕ ರಾಜ್ಯಪಾಲ ಅಲೆಕ್ಸಾಂಡರ್‌ ಡ್ರೊಜ್‌ಡೆಂಕೊ ಅವರು ಹೇಳಿದ್ದಾರೆ.

ADVERTISEMENT

ಬೆಂಕಿಗಾಹುತಿಯಾಗಿರುವ ತೈಲ ಸಂಸ್ಕರಣಾ ಘಟಕವು ವರ್ಷಕ್ಕೆ 1.77 ಕೋಟಿ ಮೆಟ್ರಿಕ್‌ ಟನ್‌ಗಳಷ್ಟು ತೈಲ ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿತ್ತು.

‘ಘಟನಾ ಸ್ಥಳದಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹತ್ತಿಕೊಂಡಿದೆ. ಪೂರ್ತಿಯಾಗಿ ಹೊಗೆ ಆವರಿಸಿತ್ತು’ ಎಂದು ಉಕ್ರೇನ್‌ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ರಕ್ಷಣಾ ಸಚಿವಾಲಯ, 'ವೈಮಾನಿಕ ಬಾಂಬ್‌ ಮತ್ತು ಅಮೆರಿಕ ನಿರ್ಮಿತ ಹಿಮಾರ್ಸ್‌ ಕ್ಷಿಪಣಿಗಳು ಸೇರಿದಂತೆ 361 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ' ಎಂದು  ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.