ADVERTISEMENT

ನಾಗರಿಕರ ಭಾಗಶಃ ಸ್ಥಳಾಂತರ: ಮರಿಯುಪೋಲ್ ಉಕ್ಕಿನ ಘಟಕದ ಮೇಲೆ ದಾಳಿ ಆರಂಭಿಸಿದ ರಷ್ಯಾ

ಪಿಟಿಐ
Published 2 ಮೇ 2022, 2:08 IST
Last Updated 2 ಮೇ 2022, 2:08 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ಕೀವ್: ನಾಗರಿಕರ ಭಾಗಶಃ ಸ್ಥಳಾಂತರದ ನಡುವೆ ರಷ್ಯಾದ ಪಡೆಗಳು ಉಕ್ರೇನ್‌ನ ಮರಿಯುಪೋಲ್‌ ನಗರದ ಉಕ್ಕಿನ ಘಟಕದ ಮೇಲೆ ಶೆಲ್ ದಾಳಿಯನ್ನು ಪುನರಾರಂಭಿಸಿದೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರದರ್ಶನದ ಸಂದರ್ಶನವೊಂದರಲ್ಲಿ ಮಾತನಾಡಿರುವ ನ್ಯಾಷನಲ್ ಗಾರ್ಡ್ ಬ್ರಿಗೇಡ್ ಕಮಾಂಡರ್ ಡೆನಿಸ್ ಶ್ಲೆಗಾ, ಅಜೋವ್‌ಸ್ಟಲ್ ಉಕ್ಕಿನ ಘಟಕದಿಂದ ಒಂದು ಸುತ್ತಿನ ನಾಗರಿಕರ ತೆರವು ಬಾಕಿ ಇತ್ತು. ಹತ್ತಾರು ಸಣ್ಣ ಮಕ್ಕಳು ಕೈಗಾರಿಕೆಗಳ ಬಂಕರ್‌ಗಳಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ಥಾವರದಿಂದ ನಾಗರಿಕರನ್ನು ಸ್ಥಳಾಂತರವನ್ನು ರಕ್ಷಣಾ ಸಿಬ್ಬಂದಿ ನಿಲ್ಲಿಸಿದ ತಕ್ಷಣ ಶೆಲ್ ದಾಳಿ ಪ್ರಾರಂಭವಾಯಿತು ಎಂದು ಶ್ಲೇಗಾ ಹೇಳಿದರು.

ADVERTISEMENT

ಸುಮಾರು 500 ಮಂದಿ ಗಾಯಗೊಂಡ ಸೈನಿಕರು ಮತ್ತು ಹಲವಾರು ಮೃತ ದೇಹಗಳ ಜೊತೆಗೆ ಇನ್ನೂ ನೂರಾರು ನಾಗರಿಕರು ಸ್ಥಳದಲ್ಲಿ ಸಿಲುಕಿದ್ದಾರೆ ಎಂದು ಕಮಾಂಡರ್ ಅಂದಾಜಿಸಿದ್ದಾರೆ. ಈ ಘಟಕವು ರಷ್ಯನ್ನರು ಆಕ್ರಮಿಸದ ನಗರದ ಏಕೈಕ ಭಾಗವಾಗಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರ ಪ್ರಕಟಿಸಿರುವ ವಿಡಿಯೊದಲ್ಲಿ ಜನರು ಉಕ್ಕಿನ ಘಟಕದಿಂದ ಹೊರಬರುತ್ತಿರುವುದು ಕಂಡುಬಂದಿದೆ. ಇದರಲ್ಲಿ ಎರಡು ಸಾಕು ನಾಯಿಗಳೊಂದಿಗೆ ಮಹಿಳೆಯರ ಸಣ್ಣ ಗುಂಪು ಸಹ ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.