ADVERTISEMENT

ಉಕ್ರೇನ್‌ ಸೇನಾ ದಾಳಿ: ವ್ಯಕ್ತಿ ಸಾವು, 41 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 14:33 IST
Last Updated 5 ಜುಲೈ 2023, 14:33 IST
ಪ್ರಾತಿನಿಧಿಕ ಚಿತ್ರ (ಎಎಫ್‌ಪಿ ಚಿತ್ರ)
ಪ್ರಾತಿನಿಧಿಕ ಚಿತ್ರ (ಎಎಫ್‌ಪಿ ಚಿತ್ರ)   

ಮಾಸ್ಕೊ: ರಷ್ಯಾದ ಪಡೆಗಳ ನಿಯಂತ್ರಣದಲ್ಲಿರುವ ಪೂರ್ವ ಉಕ್ರೇನ್ ಪಟ್ಟಣ ಮಕಿವ್ಕಾದಲ್ಲಿ ಉಕ್ರೇನ್‌ ಸೇನಾ ದಾಳಿಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ 41 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ಬುಧವಾರ ಹೇಳಿದೆ.

ಕ್ರೆಮ್ಲಿನ್ ಬೆಂಬಲಿತ ಪ್ರತ್ಯೇಕತಾವಾದಿಗಳು ಡೊನೆಟ್ಸ್ಕ್ ಪ್ರದೇಶವನ್ನು 2014 ರಿಂದ ಭಾಗಶಃ ಆಕ್ರಮಿಸಿಕೊಂಡಿದ್ದು, ಇದರ ಸಂಪೂರ್ಣ ವಶಕ್ಕಾಗಿ ರಷ್ಯಾ ಆಕ್ರಮಣ ನಡೆಸುತ್ತಿದೆ. ಈ ಕೈಗಾರಿಕಾ ಪ್ರದೇಶವು ಹಲವಾರು ವಾರಗಳಿಂದ ಉಕ್ರೇನ್‌ ಸೇನೆಯ ಪ್ರತಿದಾಳಿಯ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.

ಡೊನೆಟ್ಸ್ಕ್‌ನ ರಷ್ಯಾ ನೇಮಿತ ಮುಖ್ಯಸ್ಥ ಡೆನಿಸ್ ಪುಶಿಲಿನ್, ಉಕ್ರೇನ್‌ ಪಡೆಗಳು ಮಕಿವ್ಕಾದಲ್ಲಿ ವಸತಿ ಪ್ರದೇಶಗಳು ಮತ್ತು ಆಸ್ಪತ್ರೆ ಸಂಕೀರ್ಣದ ಮೇಲೆ ‘ಭೀಕರ ದಾಳಿ’ ನಡೆಸಿದೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.