ADVERTISEMENT

ಉಕ್ರೇನ್‌ ಹೂಡಿದ ಕೇಸು ವಜಾಗೊಳಿಸಲು ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯಕ್ಕೆ ರಷ್ಯಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 13:32 IST
Last Updated 8 ಜೂನ್ 2023, 13:32 IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ - ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ - ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ   

ದಿ ಹೇಗ್‌: ತನ್ನ ವಿರುದ್ಧ ಉಕ್ರೇನ್‌ ಹೂಡಿರುವ ಮೊಕದ್ದಮೆಯನ್ನು ವಜಾಗೊಳಿಸುವಂತೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವನ್ನು ರಷ್ಯಾ ಗುರುವಾರ ಒತ್ತಾಯಿಸಿದೆ.

201‌4ರಲ್ಲಿ ಕ್ರಿಮಿನ್‌ ಪೆನಿನ್ಸುಲಾವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿತ್ತು ಹಾಗೂ 2022ರ ಫೆಬ್ರವರಿಯಲ್ಲಿ ಉಕ್ರೇನ್‌ ಅನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲು ಪ್ರಯತ್ನಿಸುವುದಕ್ಕೂ ಮುನ್ನ ಪೂರ್ವ ಉಕ್ರೇನ್‌ನಲ್ಲಿ ಸೇನೆಯನ್ನು ಸಜ್ಜುಗೊಳಿಸಲಾಗಿತ್ತು ಎಂದು ಉಕ್ರೇನ್‌ ಮೊಕದ್ದಮೆ ಹೂಡಿತ್ತು.

‍‘ಉಕ್ರೇನ್‌ ನಮ್ಮ ವಿರುದ್ಧ ಹೂಡಿರುವ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೇಳಿಕೊಳ್ಳಲು ನಾವು ಇಂದು ಇಲ್ಲಿಗೆ ಬಂದಿದ್ದೇವೆ.‌ ಈ ಮೊಕದ್ದಮೆಗೆ ಯಾವುದೇ ಕಾನೂನಾತ್ಮಕ ತಳಹದಿಯಾಗಲಿ ಅಥವಾ ವಾಸ್ತವಿಕ ಪುರಾವೆಗಳಾಗಲಿ ಇಲ್ಲ’ ಎಂದು ನೆದರ್ಲೆಂಡ್ಸ್‌ನ ರಷ್ಯಾ ರಾಯಭಾರಿ ಅಲೆಕ್ಸಾಂಡರ್‌ ಶುಲ್ಗಿನ್‌ ಅವರು ನ್ಯಾಯಾಧೀಶರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.