ADVERTISEMENT

ಉಕ್ರೇನ್‌: ರಷ್ಯಾದಿಂದ ಮುಂದುವರಿದ ಶೆಲ್‌ ದಾಳಿ– 20 ಜನರ ಸಾವು

ಏಜೆನ್ಸೀಸ್
Published 1 ಅಕ್ಟೋಬರ್ 2022, 13:30 IST
Last Updated 1 ಅಕ್ಟೋಬರ್ 2022, 13:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೀವ್‌: ‘ಉಕ್ರೇನ್‌ನ ಈಶಾನ್ಯ ಭಾಗದಲ್ಲಿ ರಷ್ಯಾ ಶೆಲ್ ದಾಳಿ ನಡೆಸಿದ್ದು,ನಾಗರಿಕ ಬೆಂಗಾವಲು ಪಡೆಯ 20 ಮಂದಿ ಮೃತಪಟ್ಟಿದ್ದಾರೆ’ ಎಂದು ಉಕ್ರೇನ್‌ನ ಪ್ರಾದೇಶಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ಪ್ರದೇಶದಿಂದ ತೆರಳಲು ಪ್ರಯತ್ನಿಸುತ್ತಿರುವ ಜನರ ಮೇಲೆ ಶನಿವಾರ ರಷ್ಯಾ ನಡೆಸಿರುವ ಶೆಲ್‌ ದಾಳಿ ನ್ಯಾಯಸಮ್ಮತವಲ್ಲ’ ಎಂದು ಹಾರ್ಕಿವ್‌ ಪ್ರದೇಶದ ಗವರ್ನರ್ ಒಲೆಹ್ ಸಿನಿಹುಬೊವ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಸದ್ಯ ಈ ಬೆಂಗಾವಲು ಪಡೆಗಳು ಕುಪಿಯಾನ್ಸ್ಕಿ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡಿವೆ’ ಎಂದೂ ಅವರು ಹೇಳಿದರು.‌

ADVERTISEMENT

ಕಳೆದ ತಿಂಗಳುಉಕ್ರೇನ್‌ನಯಶಸ್ವಿ ಪ್ರತಿದಾಳಿಯ ನಂತರ ರಷ್ಯಾದ ಪಡೆಗಳು ಹಾರ್ಕಿವ್ ಪ್ರದೇಶದ ಬಹುತೇಕ ಭಾಗಗಳಿಂದ ಹಿಮ್ಮೆಟ್ಟಿದವಾದರೂ, ಶೆಲ್ ದಾಳಿಯನ್ನು ಮುಂದುವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.