ADVERTISEMENT

ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತು

ಪಿಟಿಐ
Published 3 ಡಿಸೆಂಬರ್ 2025, 14:16 IST
Last Updated 3 ಡಿಸೆಂಬರ್ 2025, 14:16 IST
ಡಿಮಿಟ್ರಿ ಪೆಸ್ಕೋವ್
ಡಿಮಿಟ್ರಿ ಪೆಸ್ಕೋವ್   

ಮಾಸ್ಕೊ: ನಾಗರಿಕ ಅಣುಶಕ್ತಿ ಕ್ಷೇತ್ರದಲ್ಲಿ ಭಾರತದ ಜೊತೆ ಸಹಕಾರವನ್ನು ಮತ್ತಷ್ಟು ವೃದ್ಧಿಸುವುದಕ್ಕೆ ಸಂಬಂಧಿಸಿದ ಜ್ಞಾಪನಾ ಪತ್ರಕ್ಕೆ (ಎಂಒಯು) ರಷ್ಯಾ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು ಡಿಸೆಂಬರ್ 4 ಮತ್ತು 5ರಂದು ಕೈಗೊಂಡಿರುವ ಭಾರತ ಪ್ರವಾಸ ವೇಳೆ ಈ ಕುರಿತ ಒಪ್ಪಂದಕ್ಕೆ ಉಭಯ ದೇಶಗಳು ಅಂಕಿತ ಹಾಕಲಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದ ಅಣು ನಿಗಮ ರೊಸಾಟಮ್, ತಮಿಳುನಾಡಿನ ಕೂಡಂಕುಳಂನಲ್ಲಿರುವ ಅಣುಶಕ್ತಿ ಸ್ಥಾವರದಲ್ಲಿ ಹಲವು ರಿಯಾಕ್ಟರ್‌ಗಳನ್ನು ನಿರ್ಮಿಸುತ್ತಿದೆ. ಈಗ, ಭಾರತದೊಂದಿಗಿನ ಅಣುಶಕ್ತಿ ಒಪ್ಪಂದಕ್ಕೆ ರಷ್ಯಾ ಸರ್ಕಾರದ ಪರವಾಗಿ ಸಹಿ ಹಾಕುವುದಕ್ಕೆ ಈ ನಿಗಮಕ್ಕೆ ಅಧಿಕಾರ ನೀಡಲಾಗಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

‘ನವದೆಹಲಿಯಲ್ಲಿ ನಡೆಯುವ ಉಭಯ ದೇಶಗಳ ನಾಯಕರ ಸಭೆಯಲ್ಲಿ ಈ ಕುರಿತ ಪ್ರಸ್ತಾವನೆಗಳನ್ನು ರೊಸಾಟಮ್ ಸಿಇಒ ಅಲೆಕ್ಸಿ ಲಿಗಾಚೆವ್ ಮಂಡಿಸುವರು’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.