ADVERTISEMENT

ಚೆಚನ್ಯಾ ಮೇಲಿನ ದಾಳಿ ತಂತ್ರಗಳನ್ನೇ ರಷ್ಯಾ ಈಗ ಬಳಸುತ್ತಿದೆ: ಬ್ರಿಟನ್

ಏಜೆನ್ಸೀಸ್
Published 6 ಮಾರ್ಚ್ 2022, 12:33 IST
Last Updated 6 ಮಾರ್ಚ್ 2022, 12:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಈ ಹಿಂದೆ ಚೆಚನ್ಯಾ ಹಾಗೂ ಸಿರಿಯಾ ಮೇಲಿನ ದಾಳಿ ವೇಳೆ ಅನುಸರಿಸಿದ್ದ ತಂತ್ರಗಳನ್ನೇ ರಷ್ಯಾ ಈಗ ಉಕ್ರೇನ್‌ ಮೇಲೆ ದಾಳಿ ಮಾಡುವಾಗ ಬಳಸುತ್ತಿದೆ ಎಂದು ಬ್ರಿಟನ್‌ನ ಮಿಲಿಟರಿ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ರಷ್ಯಾ ಪಡೆಗಳು 1999ರಲ್ಲಿ ಚೆಚನ್ಯಾ ಮೇಲೆ ಹಾಗೂ 2016ರಲ್ಲಿ ಸಿರಿಯಾ ಮೇಲೆ ದಾಳಿ ನಡೆಸಿದ್ದವು. ಆಗ, ಈ ಎರಡೂ ದೇಶಗಳ ಸೇನೆಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಅವುಗಳ ನಗರಗಳ ಮೇಲೆ ಭೀಕರ ದಾಳಿ ನಡೆಸಿದ್ದ ರಷ್ಯಾ ಪಡೆಗಳು ವ್ಯಾಪಕ ಹಾನಿ ಉಂಟು ಮಾಡಿದ್ದವು ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ತನ್ನ ದಾಳಿಗೆ ಉಕ್ರೇನ್‌ ಪಡೆಗಳು ಒಡ್ಡುತ್ತಿರುವ ಪ್ರತಿರೋಧ ರಷ್ಯಾ ಪಡೆಗಳಿಗೆ ಅಚ್ಚರಿ ಮೂಡಿಸಿದೆ. ಇದೇ ಕಾರಣಕ್ಕೆ ಅವು ಹಾರ್ಕಿವ್, ಚೆರ್ನಿಹಿವ್, ಮರಿಯುಪೋಲ್‌ ನಗರಗಳಲ್ಲದೇ, ಇತರ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ದಾಳಿ ನಡೆಸುತ್ತಿವೆ’ ಎಂದು ಸಚಿವಾಲಯ ವಿಶ್ಲೇಷಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.