ADVERTISEMENT

ಕೂಡಲೇ ಹಾರ್ಕಿವ್ ತೊರೆಯಿರಿ: ಭಾರತೀಯರಿಗೆ ಭಾರತದ ರಾಯಭಾರ ಕಚೇರಿ ಕಟ್ಟಪ್ಪಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 13:08 IST
Last Updated 2 ಮಾರ್ಚ್ 2022, 13:08 IST
ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು: ರಾಯಿಟರ್ಸ್ ಚಿತ್ರ
ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು: ರಾಯಿಟರ್ಸ್ ಚಿತ್ರ   

ಕೀವ್: ಉಕ್ರೇನ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ಹೋಗುತ್ತಿದ್ದು, ಹಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯರು ಕೂಡಲೇ ನಗರವನ್ನು ತೊರೆದು ರಾತ್ರಿ 9.30ರ ವೇಳೆಗೆ(ಉಕ್ರೇನ್ ಕಾಲಮಾನ ಸಂಜೆ 6 ಗಂಟೆ) ರೈಲು ನಿಲ್ದಾಣಗಳನ್ನು ತಲುಪುವಂತೆ ಭಾರತದ ರಾಯಭಾರ ಕಚೇರಿ ಸೂಚಿಸಿದೆ.

ಹಾರ್ಕೀವ್‌ನಲ್ಲಿರುವ ಎಲ್ಲ ಭಾರತೀಯರಿಗೆ ತುರ್ತು ಸಲಹೆ. ಅವರ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಕೂಡಲೇ ಅವರು ಹಾರ್ಕೀವ್ ನಗರವನ್ನು ತೊರೆಯಲೇಬೇಕು ಎಂದು ಹೇಳಿರುವ ರಾಯಭಾರ ಕಚೇರಿಯು ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾ ರೈಲು ನಿಲ್ದಾಣಗಳಿಗೆಸಂಜೆ 6 ಗಂಟೆಯೊಳಗೆ ತಲುಪುವಂತೆ ಅವರಿಗೆ ಸೂಚಿಸಿದೆ.

ಯಾವುದೇ ಸಂದರ್ಭದಲ್ಲೂ ಅವರು 6 ಗಂಟೆ ಒಳಗೆ ಈಪ್ರದೇಶಗಳನ್ನು ತಲುಪುವಂತೆ ಸೂಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.