ADVERTISEMENT

ರಷ್ಯಾ ಆಕ್ರಮಣ: ಹಾರ್ಕಿವ್‌ ಪ್ರದೇಶದಲ್ಲಿ ಉಕ್ರೇನ್‌ನ 34 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 9:59 IST
Last Updated 3 ಮಾರ್ಚ್ 2022, 9:59 IST
ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನ ಹಾರ್ಕಿವ್‌ ನಗರದಲ್ಲಿ ಭಗ್ನಗೊಂಡ ಕಟ್ಟಡ
ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನ ಹಾರ್ಕಿವ್‌ ನಗರದಲ್ಲಿ ಭಗ್ನಗೊಂಡ ಕಟ್ಟಡ   

ಕೀವ್: ಕಳೆದ 24 ಗಂಟೆಗಳಲ್ಲಿ(ಮಾರ್ಚ್‌ 2 ರಿಂದ 3) ಉಕ್ರೇನ್‌ನ ಹಾರ್ಕಿವ್ ಪ್ರದೇಶದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ.

ಈ ಕುರಿತು ಉಕ್ರೇನ್‌ ಸರ್ಕಾರ ಗುರುವಾರ ದೃಢಪಡಿಸಿರುವುದಾಗಿ ಸುದ್ದಿಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

ರಷ್ಯಾದ ಆಕ್ರಮಣದಿಂದಾಗಿ ಮರಿಯುಪೋಲ್ ನಗರದಲ್ಲಿ ವಿದ್ಯುತ್ ಹಾಗೂ ನೀರಿನ ಸರಬರಾಜು ಕಡಿತಗೊಂಡಿದೆ ಎಂದು ಉಕ್ರೇನ್‌ನ ತುರ್ತು ಸೇವಾ ವಿಭಾಗವು ಖಚಿತಪಡಿಸಿದೆ.

ADVERTISEMENT

ಉಕ್ರೇನ್‌ ನಗರಗಳ ಮೇಲೆ ರಷ್ಯಾದ ಸೇನಾಪಡೆಯು ಭೀಕರ ದಾಳಿ ನಡೆಸುತ್ತಿದೆ. ಉಕ್ರೇನ್‌ ಸೇನಾಪಡೆ ಮತ್ತು ಅಲ್ಲಿನ ನಾಗರಿಕರು ರಷ್ಯಾ ದಾಳಿಗೆ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ.

ರಷ್ಯಾದ ದಾಳಿಯನ್ನು ನಾವು ಕೊನೆಯವರೆಗೂ ಎದುರಿಸಲಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಉಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ 498 ಸೈನಿಕರು ಹತರಾಗಿದ್ದಾರೆ ಎಂದು ರಷ್ಯಾ ಒಪ್ಪಿಕೊಂಡಿದೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.