ADVERTISEMENT

ಉಕ್ರೇನ್‌ನ ವಿದ್ಯುತ್ ಕೇಂದ್ರಗಳು ಸ್ಥಿರವಾಗಿವೆ: ಉಕ್ರೇನ್‌ ಇಂಧನ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 15:47 IST
Last Updated 3 ಮಾರ್ಚ್ 2022, 15:47 IST
ಉಕ್ರೇನ್‌ನ ವಸತಿ ಸಮುಚ್ಚಯಗಳ ಮೇಲೆ ದಾಳಿ ಮಾಡಿದ ರಷ್ಯಾ
ಉಕ್ರೇನ್‌ನ ವಸತಿ ಸಮುಚ್ಚಯಗಳ ಮೇಲೆ ದಾಳಿ ಮಾಡಿದ ರಷ್ಯಾ   

ಕೀವ್‌: ರಷ್ಯಾ ಆಕ್ರಮಣದ ನಂತರ ಸೃಷ್ಟಿಯಾದ ವ್ಯಾಪಕ ಅಭದ್ರತೆಯ ಹೊರತಾಗಿಯೂ ದೇಶದಲ್ಲಿ ವಿದ್ಯುತ್ ಕೇಂದ್ರಗಳು ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಉಕ್ರೇನ್‌ ಹೇಳಿದೆ.

ಈ ಕುರಿತು ಸುದ್ದಿಸಂಸ್ಥೆ ‘ರಾಯಿಟರ್ಸ್‌’ಗೆ ಉಕ್ರೇನ್‌ನ ಇಂಧನ ಸಚಿವ ಹರ್ಮನ್‌ ಹಲುಶ್ಚೆಂಕೊ ಮಾಹಿತಿ ನೀಡಿದ್ದಾರೆ.

‘ಉಕ್ರೇನ್‌ನ ವಿದ್ಯುತ್‌ ಕೇಂದ್ರಗಳು ಹಾಗೂ ಯುರೋಪಿಯನ್ ಟ್ರಾನ್ಸ್‌ಮಿಷನ್ ನೆಟ್‌ವರ್ಕ್‌ ನಡುವೆ ಸಂಪರ್ಕ ಕಲ್ಪಿಸಲು ತಾಂತ್ರಿಕ ಕಾರ್ಯ ನಡೆಯುತ್ತಿದೆ’ ಎಂದೂ ಅವರು ಹೇಳಿದರು.

ADVERTISEMENT

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ಮಕ್ಕಳು ಸೇರಿದಂತೆ ನಾಗರಿಕರ ಸಾವುಗಳು ಸಂಭವಿಸುತ್ತಿವೆ. ಲಕ್ಷಾಂತರ ಜನರು ಉಕ್ರೇನ್‌ನಿಂದ ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಇದು ಎರಡನೇ ಮಹಾಯುದ್ಧದ ಬಳಿಕ ಅತಿ ದೊಡ್ಡ ಮಾನವ ಬಿಕ್ಕಟ್ಟಾಗಿ ಪರಿಣಮಿಸಲಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.