ADVERTISEMENT

ಉಕ್ರೇನ್ ರಾಜಧಾನಿ ಕೀವ್‌ನಿಂದ ರಷ್ಯಾದ ಸೇನೆ ವಾಪಸ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 15:33 IST
Last Updated 1 ಅಕ್ಟೋಬರ್ 2022, 15:33 IST
   

ಕೀವ್: ಉಕ್ರೇನ್‌ನ ಲಿಮನ್ ನಗರವನ್ನು ವಶಕ್ಕೆ ಪಡೆದಿದ್ದ ರಷ್ಯಾ ಈಗ ಅಲ್ಲಿ ಬೀಡುಬಿಟ್ಟಿದ್ದ ತನ್ನ ಸೇನೆಯನ್ನು ವಾಪಸು ಕರೆಸಿಕೊಳ್ಳುತ್ತಿದೆ. ಈ ನಗರವನ್ನು ಮತ್ತೆ ತನ್ನ ಸುಪರ್ದಿಗೆ ಪಡೆಯಲು ಉಕ್ರೇನ್ ಸೇನೆ ಸುತ್ತುವರಿದ ಹಿಂದೆಯೇ ಈ ಬೆಳವಣಿಗೆ ನಡೆದಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಸುದ್ದಿ ಸಂಸ್ಥೆಗಳು ಇದನ್ನು ದೃಢಪಡಿಸಿವೆ. ಹಾರ್ಕಿವ್‌ಗೆ 160 ಕಿ.ಮೀ ದೂರದಲ್ಲಿರುವ ಲಿಮನ್‌, ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ. ಪ್ರತಿರೋಧ ಕ್ರಮವಾಗಿ ಉಕ್ರೇನ್‌ ಸೇನೆ ಈ ನಗರವನ್ನು ಸುತ್ತುವರೆದಿವೆ.

ಇದಕ್ಕೂ ಮುನ್ನ,ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯಸ್ಥನನ್ನು ರಷ್ಯಾ ಅಪಹರಣ ಮಾಡಿದೆ ಎಂದು ಶನಿವಾರ ಉಕ್ರೇನ್‌ ಆರೋಪಿಸಿದೆ.

ADVERTISEMENT

ರಷ್ಯಾ ಸೇನಾಪಡೆಗಳು ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಪ್ರಧಾನ ನಿರ್ದೇಶಕ ಇಹೋರ್ ಮುರಶೋವ್ ಅವರನ್ನು ಶುಕ್ರವಾರ ಸಂಜೆ ಅಪಹರಣ ಮಾಡಿವೆ.ಅವರ ಕಾರನ್ನು ರಷ್ಯಾ ಪಡೆಗಳು ತಡೆದು, ಕಣ್ಣಿಗೆ ಬಟ್ಟೆ ಕಟ್ಟಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದುಉಕ್ರೇನ್ ಸರ್ಕಾರಿ ಪರಮಾಣು ಕಂಪನಿ ಎನರ್ಗೋಟಮ್ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.