ADVERTISEMENT

ರಷ್ಯಾದ ಮೂವರು ಗಗನಯಾನಿಗಳು ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 14:54 IST
Last Updated 19 ಮಾರ್ಚ್ 2022, 14:54 IST
ಉಕ್ರೇನ್ ಧ್ವಜ ಹೋಲುವ ವಸ್ತ್ರ ಧರಿಸಿ ಅಂತರರಾಷ್ಟ್ರೀಯ ಬಾಹ್ಯಾಕೇಶ ಕೇಂದ್ರಕ್ಕೆ ಬಂದ ರಷ್ಯಾ ಗಗನಯಾನಿಗಳು 
ಉಕ್ರೇನ್ ಧ್ವಜ ಹೋಲುವ ವಸ್ತ್ರ ಧರಿಸಿ ಅಂತರರಾಷ್ಟ್ರೀಯ ಬಾಹ್ಯಾಕೇಶ ಕೇಂದ್ರಕ್ಕೆ ಬಂದ ರಷ್ಯಾ ಗಗನಯಾನಿಗಳು    

ನ್ಯೂಯಾರ್ಕ್(ಎಪಿ): ಉಕ್ರೇನ್ ಧ್ವಜಕ್ಕೆ ಹೋಲುವ ಹಳದಿ ಮತ್ತು ನೀಲಿ ಬಣ್ಣದ ವಿಮಾನದ ಧಿರಿಸುಗಳನ್ನು ಧರಿಸಿದ್ದ ರಷ್ಯಾದ ಮೂವರು ಗಗನಯಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿದ್ದಾರೆ. ಉಕ್ರೇನ್-ರಷ್ಯಾ ಮಧ್ಯೆ ಯುದ್ಧ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಷ್ಯಾದ ಗಗನಯಾನಿಗಳು ಬಾಹ್ಯಾಕಾಶ ಕೇಂದ್ರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್‌ಗೆ ಬೆಂಬಲ ಸೂಚಕವಾಗಿ ಉಕ್ರೇನ್‌ ರಾಷ್ಟ್ರಧ್ವಜ ಹೋಲುವ ಬಟ್ಟೆ ಧರಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಹಳದಿ ಮತ್ತು ನೀಲಿಯ ಧಿರಿಸುನೊಂದಿಗೆ ಬಂದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಗಗನಯಾನಿ ಒಲೆಗ್ ಆರ್ಟೆಮೀವ್ ಅವರು, 'ಎಲ್ಲಾ ಪೈಲಟ್‌ಗಳು ತಾವು ಬಯಸುವ ವಿಮಾನದ ಉಡುಗೆಗಳನ್ನು ಧರಿಸಬಹುದು. ಅದರಂತೆ ನಮಗೆ ಇಷ್ಟವಾದ ಬಣ್ಣದ ಬಟ್ಟೆ ಧರಿಸಿದ್ದೇವೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT