ADVERTISEMENT

ಉಕ್ರೇನ್‌ ಸೊಲೆದಾರ್ ಪಟ್ಟಣ ಸುತ್ತುವರಿದ ರಷ್ಯಾ

ರಾಯಿಟರ್ಸ್
Published 11 ಜನವರಿ 2023, 12:52 IST
Last Updated 11 ಜನವರಿ 2023, 12:52 IST
ಸೊಲೆದಾರ್‌ನಲ್ಲಿ ಗಾಯಗೊಂಡ ಉಕ್ರೇನ್‌ನ ಯೋಧರೊಬ್ಬರಿಗೆ ಚಿಕಿತ್ಸೆ ನೀಡಲಾಯಿತು  –ಎಪಿ/ಪಿಟಿಐ ಚಿತ್ರ
ಸೊಲೆದಾರ್‌ನಲ್ಲಿ ಗಾಯಗೊಂಡ ಉಕ್ರೇನ್‌ನ ಯೋಧರೊಬ್ಬರಿಗೆ ಚಿಕಿತ್ಸೆ ನೀಡಲಾಯಿತು  –ಎಪಿ/ಪಿಟಿಐ ಚಿತ್ರ   

ಮಾಸ್ಕೊ: ರಷ್ಯಾದ ಯುದ್ಧ ವಿಮಾನಗಳು ಪೂರ್ವ ಉಕ್ರೇನ್‌ನ ಸೊಲೆದಾರ್ ಪಟ್ಟಣವನ್ನು ಸುತ್ತುವರಿದಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ರಷ್ಯಾದ ಯುದ್ಧ ವಿಮಾನಗಳು ಉಕ್ರೇನ್‌ನ ಈ ಪಟ್ಟಣದ ಮೇಲೆ ದಾಳಿ ನಡೆಸಿ, ಹಾನಿ ಮಾಡಿದೆ ಎಂದು ರಷ್ಯಾದ ಏಜೆನ್ಸಿಗಳು ವರದಿ ಮಾಡಿವೆ.

ಉಕ್ರೇನ್‌ನ ಸಣ್ಣ ಪಟ್ಟಣಗಳಲ್ಲಿ ಒಂದಾದ ಸೊಲೆದಾರ್ ಅನ್ನು ವಶಪಡಿಸಿಕೊಳ್ಳಲು ರಷ್ಯಾದ ಸೇನೆ ಹೋರಾಡುತ್ತಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಆದರೆ ಸೊಲೆದಾರ್‌ನ ವಿಜಯವನ್ನು ಘೋಷಿಸಲು ಆತುರ ಪಡಬೇಡಿ ಎಂದು ಕ್ರೆಮ್ಲಿನ್ ಬುಧವಾರ ತನ್ನ ರಕ್ಷಣಾ ಪಡೆಗಳಿಗೆ ಸೂಚಿಸಿದೆ. ‘ಈ ಸಂಬಂಧ ಯಾವುದೇ ಆತುರ ಮಾಡಬೇಡಿ. ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಿ’ ಎಂದು ಕ್ರೆಮ್ಲಿನ್‌ನ ವಕ್ತಾರ ಡಮಿಟ್ರಿ ಪೆಸ್ಕೊವ್‌ ತಿಳಿಸಿದ್ದಾರೆ.

ADVERTISEMENT

ರಷ್ಯಾದ ಈ ಹೇಳಿಕೆ ‘ಸುಳ್ಳು’ ಎಂದು ಉಕ್ರೇನ್‌ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.