ADVERTISEMENT

ಹೋಟೆಲ್‌ನ 16ನೇ ಮಹಡಿಯಿಂದ ಬಿದ್ದು ರಷ್ಯಾ ಅಧ್ಯಕ್ಷರ ಆಪ್ತೆ ನಿಗೂಢ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2023, 14:18 IST
Last Updated 17 ಫೆಬ್ರುವರಿ 2023, 14:18 IST
ಮರಿನಾ ಯಾಕಿನಾ
ಮರಿನಾ ಯಾಕಿನಾ   

ಸೇಂಟ್‌ಪೀಟರ್ಸ್‌ಬರ್ಗ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತೆ ಹಾಗೂ ರಷ್ಯಾ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಣಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ವರದಿಯಾಗಿದೆ.

ರಷ್ಯಾದ ಪೂರ್ವ ಮಿಲಿಟರಿ ವಲಯದ ಹಣಕಾಸು ಮುಖ್ಯಸ್ಥೆ 54 ವರ್ಷದ ಮರಿನಾ ಯಾಕಿನಾ ಸೇಂಟ್‌ಪೀಟರ್ಸ್‌ಬರ್ಗ್‌ನ ಜಮಾಶೈನ್‌ ಹೋಟೆಲ್‌ ಒಂದರ ಕೋಣೆಯ ಕಿಟಕಿಯಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.

‘ಮರಿನಾ ಯಾಕಿನಾ ಹೋಟೆಲ್‌ನ 16 ನೇ ಮಹಡಿಯ 160 ಅಡಿಯಿಂದ ಬಿದ್ದು ಮೃತಪಟ್ಟಿದ್ದು. ತನಿಖೆ ನಡೆಸಲಾಗುತ್ತಿದೆ’ ಎಂದು ಸೇಂಟ್‌ಪೀಟರ್ಸ್‌ಬರ್ಗ್ ಪೊಲೀಸರು ತಿಳಿಸಿದ್ದಾರೆ.

ADVERTISEMENT

ರಷ್ಯಾ ಉಕ್ರೇನ್‌ನ ಆಕ್ರಮಣ ಮಾಡುವುದಕ್ಕೆ ಏನೇನು ಹಣಕಾಸು ವ್ಯವಹಾರ ಮಾಡಿದೆ? ಎಂಬುದಕ್ಕೆ ಮರಿನಾ ಪ್ರಮುಖ ಸಾಕ್ಷ್ಯವಾಗಿದ್ದರು ಎನ್ನಲಾಗಿದೆ.

‘ಮರಿನಾ ಯಾಕಿನಾ ತಂಗಿದ್ದ ಹೋಟೆಲ್‌ನಿಂದ ತನಗೆ ಕರೆ ಬಂದಿತ್ತು. ನಾನು ಒಂದು ವಿಷಯ ತಿಳಿಸಲು ಪೊಲೀಸರ ಬಳಿ ಹೋಗಬೇಕಿದೆ ಎಂದು ಹೇಳಿದ್ದಳು. ಆದರೆ, ಅದಾದ 10 ನಿಮಿಷದ ಬಳಿಕ ಆಕೆ ಸಾವಿನ ಸುದ್ದಿ ಬಂತು’ ಎಂದು ಮರಿನಾ ಮಾಜಿ ಪತಿ ಹೇಳಿದ್ದಾರೆ.

ರಷ್ಯಾ– ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾದ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾದ ಹಲವರು ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟವರ ಗುಂಪಿಗೆ ಮರಿನಾ ಸೇರಿದ್ದಾರೆ.

ಇದೇ ರೀತಿ ರಷ್ಯಾದ ವಿರೋಧ ಪಕ್ಷದ ಸಂಸದ ಪಾವೆಲ್‌ ಆ್ಯಂಥವ್‌ ಹಾಗೂ ವಕೀಲ ವಾಡ್ಲಿಮಿರ್‌ ಬಿದೆವೊ ಅವರು ಒಡಿಶಾದ ರಾಯಗಢದ ಹೋಟೆಲ್‌ವೊಂದರ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.