ADVERTISEMENT

ಉಕ್ರೇನ್‌ ದಾಳಿ: ರಷ್ಯಾ ನೌಕಾ ಹಡಗಿಗೆ ಹಾನಿ

ಏಜೆನ್ಸೀಸ್
Published 26 ಡಿಸೆಂಬರ್ 2023, 13:53 IST
Last Updated 26 ಡಿಸೆಂಬರ್ 2023, 13:53 IST
   

ಕೀವ್‌: ಉಕ್ರೇನ್‌ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ರಷ್ಯಾದ ನೌಕಾ ಹಡಗಿಗೆ ಹಾನಿಯಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಉಕ್ರೇನ್‌ನ ಎರಡು ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ ಕ್ರಿಮಿಯಾ ಬಂದರಿನಲ್ಲಿ ಲಂಗರು ಹಾಕಿದ್ದ ನೊವೊಚೆರ್‌ಕಾಸ್ಸಕ್‌ ಹಡಗು ಹಾನಿಗೊಳಗಾಗಿದೆ. ಎಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂಬ ಬಗ್ಗೆ ತಕ್ಷಣಕ್ಕೆ ವರದಿ ಲಭ್ಯವಾಗಿಲ್ಲ. ಆದರೆ ಬಂದರು ಪ್ರದೇಶದಲ್ಲಿ ಬೆಂಕಿ ಆವರಿಸಿರುವ ವಿಡಿಯೊವನ್ನು ಉಕ್ರೇನ್‌ ಮಾಧ್ಯಮಗಳು ಪ್ರಸಾರ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT