ADVERTISEMENT

ಚೀನಾ ಯೋಧರ ಅವಶೇಷಗಳ ಹಸ್ತಾಂತರ

ಏಜೆನ್ಸೀಸ್
Published 27 ಸೆಪ್ಟೆಂಬರ್ 2020, 7:34 IST
Last Updated 27 ಸೆಪ್ಟೆಂಬರ್ 2020, 7:34 IST

ಬೀಜಿಂಗ್‌: 1950–53ರ ಕೊರಿಯಾ ಯುದ್ಧದಲ್ಲಿ ಮೃತಪಟ್ಟ 117 ಚೀನಾ ಯೋಧರ ಅವಶೇಷಗಳನ್ನು ಚೀನಾಕ್ಕೆ ಹಿಂತಿರುಗಿಸಲಾಗಿದೆ.

ಸೋಲ್ ನಗರದ ಹೊರಭಾಗದಲ್ಲಿರುವ ಇಂಚಿಯಾನ್ ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕೊರಿಯಾ, ಚೀನಾ ಮಿಲಿಟರಿ ಪಡೆಗೆ ಯೋಧರ ಅವಶೇಷಗಳನ್ನು ಹಸ್ತಾಂತರಿಸಿತು. ನಂತರ ಚೀನಾದ ಮಿಲಿಟರಿ ವಿಮಾನವು ಉತ್ತರ ಕೊರಿಯಾದ ಗಡಿಯ ಸಮೀಪವಿರುವ ಈಶಾನ್ಯ ಚೀನಾದ ನಗರವಾದ ಶೆನ್ಯಾಂಗ್‌ಗೆ ಹಾರಿತು.

ಕೊರಿಯಾದ ಪರ್ಯಾಯ ದ್ವೀಪದಲ್ಲಿ ಅಮೆರಿಕ ಪಡೆಗಳ ವಿರುದ್ಧ ನಡೆದ ಯುದ್ಧದಲ್ಲಿ ಉತ್ತರ ಕೊರಿಯಾ ಪರ ಚೀನಾ ಯೋಧರು ಹೋರಾಟ ನಡೆಸಿದ್ದರು. 117 ಯೋಧರ ಅವಶೇಷಗಳಲ್ಲಿ ಹೆಚ್ಚಿನವು ಉತ್ತರ ಮತ್ತು ದಕ್ಷಿಣ ಕೊರಿಯಾವನ್ನು ಬೇರ್ಪಡಿಸುವ ವಲಯದಲ್ಲಿ ಪತ್ತೆಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.