ADVERTISEMENT

ವಿಶ್ವದ ಅತಿ ದುಬಾರಿ ಮನೆಯಲ್ಲಿ ವಾಸ್ತವ್ಯ ಹೂಡಿದ ಸೌದಿ ಯುವರಾಜ

ಏಜೆನ್ಸೀಸ್
Published 28 ಜುಲೈ 2022, 16:22 IST
Last Updated 28 ಜುಲೈ 2022, 16:22 IST
ಸೌದಿ ಯುವರಾಜನ ಬಂಗಲೆಯ ಬಳಿ ಪೊಲೀಸರ ಬಿಗಿ ಭದ್ರತೆ
ಸೌದಿ ಯುವರಾಜನ ಬಂಗಲೆಯ ಬಳಿ ಪೊಲೀಸರ ಬಿಗಿ ಭದ್ರತೆ    

ಪ್ಯಾರಿಸ್‌: ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭೇಟಿಗಾಗಿ ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ‘ವಿಶ್ವದ ಅತ್ಯಂತ ದುಬಾರಿ ಮನೆ’ ಚಟೌ ಲೂಯೀಸ್‌ನಲ್ಲಿ ತಂಗಿದ್ದಾರೆ.

ಫ್ರಾನ್ಸ್‌ನ ಈ ಬಂಗಲೆಯನ್ನು ಸೌದಿ ಯುವರಾಜ 2015ರಲ್ಲಿ ಖರೀದಿಸಿದ್ದರು.

ಪ್ಯಾರಿಸ್‌ ಹೊರವಲಯದ ಲೌವೆಸಿನ್ನೆಸ್‌ನಲ್ಲಿರುವ ಹೊಸ ಬಂಗಲೆ ಚಟೌ ಲೂಯಿಸ್–XIV, ಫ್ರೆಂಚ್ ರಾಜಮನೆತನದ ಒಂದು ಕಾಲದ ಅಸ್ಥಾನವಾಗಿದ್ದ, ವರ್ಸೈಲ್ಸ್ ಅರಮನೆಯನ್ನು ಅನುಕರಿಸುವ ಉದ್ದೇಶವನ್ನು ಹೊಂದಿತ್ತು.

ADVERTISEMENT

7,000-ಚದರ ಮೀಟರ್ ವಿಸ್ತೀರ್ಣದ ಈ ಬಂಗಲೆಯನ್ನು 2015 ರಲ್ಲಿ ಹೆಸರು ಬಹಿರಂಗವಾಗದ ಖರೀದಿದಾರರೊಬ್ಬರು 275 ಮಿಲಿಯನ್ ಯುರೋಗಳಿಗೆ (ಆ ಸಮಯದಲ್ಲಿ $300 ದಶಲಕ್ಷ) ಪಡೆದುಕೊಂಡಿದ್ದರು. ಇದನ್ನು ‘ವಿಶ್ವದ ಅತ್ಯಂತ ದುಬಾರಿ ಮನೆ’ ಎಂದು ‘ಫಾರ್ಚೂನ್’ ನಿಯತಕಾಲಿಕದಲ್ಲಿ ಬಣ್ಣಿಸಲಾಗಿತ್ತು.

ಸೌದಿಯ ಯುವರಾಜ ಬಿನ್ ಸಲ್ಮಾನ್ (36) ಇದರ ಮಾಲೀಕ ಎಂದು ಎರಡು ವರ್ಷಗಳ ನಂತರ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.

ಮ್ಯಾಕ್ರನ್ ಅವರೊಂದಿಗಿನ ಭೋಜನಕ್ಕೆ ಮುಂಚಿತವಾಗಿ ಮೊಹಮದ್‌ ಬಿನ್‌ ಸಲ್ಮಾನ್‌ ಅವರು ಗುರುವಾರ ಈ ಬಂಗಲೆಯಲ್ಲಿ ತಂಗಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಸುದ್ದಿ ಸಂಸ್ಥೆ ಎಎಫ್‌ಪಿಗೆ ದೃಢಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.