ADVERTISEMENT

ಸೆಪ್ಟೆಂಬರ್‌ನಿಂದ ಕೀವ್‌ನಲ್ಲಿ ಶಾಲೆಗಳು ಪುನರಾರಂಭ

ಕೀವ್ ಮೇಲೆ ಸೇನಾ ಕಾರ್ಯಾಚರಣೆಯನ್ನು ತಗ್ಗಿಸಿದ ರಷ್ಯಾ

ಏಜೆನ್ಸೀಸ್
Published 1 ಜುಲೈ 2022, 13:48 IST
Last Updated 1 ಜುಲೈ 2022, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್‌: ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಸೆಪ್ಟೆಂಬರ್‌ 1ರಿಂದ ಶಾಲೆಗಳು ಪುನರಾರಂಭವಾಗಲಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸದ್ಯ ಉಕ್ರೇನ್‌ನಲ್ಲಿ ಶಾಲೆಗಳಿಗೆಬೇಸಿಗೆ ರಜೆ ನೀಡಲಾಗಿದೆ. ಕಳೆದ ಫೆಬ್ರುವರಿ 24ರಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗಿನಿಂದ ಆನ್‌ಲೈನ್‌ ಮೂಲಕ ಶಾಲಾ ತರಗತಿಗಳನ್ನು ನಡೆಸಲಾಗುತ್ತಿತ್ತು.

ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಮತ್ತು ವಿಜ್ಞಾನ ಇಲಾಖೆ ಮುಖ್ಯಸ್ಥೆ ಒಲೆನಾ ಫಿದನ್‌ಯಾನ್, ‘ಮಕ್ಕಳು ಮತ್ತು ಶಿಕ್ಷಕರ ಸುರಕ್ಷತೆಯೇ ನಮ್ಮ ಆದ್ಯತೆ. ಹೀಗಾಗಿ ಶಾಲೆ ಆರಂಭಕ್ಕೂ ಮೊದಲು ವಾಯುದಾಳಿ ಸಂದರ್ಭದಲ್ಲಿ ಹೇಗೆ ರಕ್ಷಣೆ ಪಡೆದುಕೊಳ್ಳಬೇಕು ಎಂದು ತರಬೇತಿ ನೀಡಲಾಗುತ್ತದೆ. ಶಾಲೆಗಳಲ್ಲಿ ನೀರು, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಸದ್ಯ ರಷ್ಯಾ ಕೀವ್‌ನಲ್ಲಿ ಸೇನಾ ಕಾರ್ಯಾಚರಣೆಯನ್ನು ತಗ್ಗಿಸಿದೆ. ಹೀಗಾಗಿ ಸಾವಿರಾರು ನಿವಾಸಿಗಳು ರಾಜಧಾನಿಗೆ ಮರಳಿದ್ದಾರೆ. ರೆಸ್ಟೊರೆಂಟ್‌, ಸೂಪರ್ ಮಾರ್ಕೆಟ್‌ ಮತ್ತಿತರ ಚಟುವಟಿಕೆಗಳು ನಿಧಾನವಾಗಿ ಪುನರಾರಂಭಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.