ಬೀಜಿಂಗ್: ಆಗ್ನೇಯ ಚೀನಾದ ಪುಟಿಯನ್ ನಗರದಲ್ಲಿ ಕೊರೊನಾದ ಡೆಲ್ಟಾ ರೂಪಾಂತರ ಕಾಣಿಸಿಕೊಂಡಿದ್ದು, ಮಂಗಳವಾರ ಒಂದೇ ದಿನದಲ್ಲಿ 59 ಹೊಸ ಪ್ರಕರಣಗಳು ದೃಢಪಟ್ಟಿವೆ.
ಬಂದರು ನಗರ ಕ್ಸಿಯಾಮೆನ್‌ನಲ್ಲಿ ಎರಡು ದಿನಗಳಿಂದ 33 ಪ್ರಕರಣಗಳು ದೃಢಪಟ್ಟಿದ್ದ ಬೆನ್ನಲ್ಲೇ ಪುಟಿಯನ್‌ನಲ್ಲಿ ಈ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಕ್ಸಿಯಾಮೆನ್ ನಗರದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಮನರಂಜನಾ ತಾಣಗಳು, ಫಿಟ್ನೆಸ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಮುಂದೆ ಬರುವಂತಹ ಎಲ್ಲ ಹಬ್ಬಗಳನ್ನು ರದ್ದುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.