ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣದಲ್ಲಿ ಗುಪ್ತಚರ ಸಂಸ್ಥೆಯ ವೈಫಲ್ಯ ಎದ್ದುಕಾಣುತ್ತಿದೆ. ಗುಪ್ತಚರ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ, ಇದನ್ನು ತಡೆಯಬಹುದಿತ್ತು ಎಂದು ಸೆನೆಟ್ ಸಮಿತಿಯ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜುಲೈನಲ್ಲಿ ನಡೆದ ರ‍್ಯಾಲಿ ವೇಳೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಬಂದೂಕುಧಾರಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದ.
ಗುಂಡಿನ ದಾಳಿಗೂ ಮೊದಲು, ಟ್ರಂಪ್ ಅವರ ಭದ್ರತೆಗೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಮತ್ತು ಗುಪ್ತಚರ ಸೇವೆ ನಡುವಿನ ಸಂವಹನ, ಯೋಜನೆ... ಹೀಗೆ ಪ್ರತಿ ಹಂತದಲ್ಲೂ ಹಲವು ವೈಫಲ್ಯಗಳು ಆಗಿರುವುದನ್ನು ಸಮಿತಿ ಪತ್ತೆ ಮಾಡಿದೆ. ಸೆನೆಟ್ ಸಮಿತಿಯ ತನಿಖಾ ವರದಿಯಲ್ಲಿ ಹೇಳಿರುವ ಅಂಶಗಳನ್ನೇ ತನಿಖಾ ಸಂಸ್ಥೆಯ ಆಂತರಿಕ ತನಿಖೆ, ಸೆನೆಟ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ಗವರ್ನಮೆಂಟ್ ಅಫೇರ್ಸ್ ಕಮಿಟಿಯ ಮಧ್ಯಂತರ ವರದಿಯಲ್ಲೂ ಹೇಳಲಾಗಿತ್ತು.
‘ಆ ವೈಫಲ್ಯಗಳ ಪರಿಣಾಮಗಳು ಭೀಕರವಾಗಿವೆ’ ಎಂದು ಹೋಮ್‌ಲ್ಯಾಂಡ್ ಪ್ಯಾನೆಲ್‌ನ ಡೆಮಾಕ್ರಟಿಕ್ ಅಧ್ಯಕ್ಷರಾದ ಮಿಷಿಗನ್ ಸೆನ್ ಗ್ಯಾರಿ ಪೀಟರ್ಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.