ADVERTISEMENT

ಪಾಕಿಸ್ತಾನ: ಭದ್ರತಾ ಪಡೆಗಳ ಪ್ರತ್ಯೇಕ ಕಾರ್ಯಾಚರಣೆ, 15 ಉಗ್ರರ ಹತ್ಯೆ

ಪಿಟಿಐ
Published 24 ಅಕ್ಟೋಬರ್ 2021, 10:47 IST
Last Updated 24 ಅಕ್ಟೋಬರ್ 2021, 10:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ವೆಟ್ಟಾ, ಪಾಕಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶನಿವಾರ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ಸೇರಿದ 15 ಉಗ್ರರನ್ನು ಭದ್ರತಾ ಪಡೆಗಳು ಕೊಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಲೂಚಿಸ್ತಾನದ ಮಸ್ತುಂಗ್‌ ಪ್ರದೇಶದಲ್ಲಿ ವಿವಿಧ ನಿಷೇಧಿತ ಸಂಘಟನೆಗಳ ಒಂಬತ್ತು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಅವರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಇಲಾಖೆಯ (ಸಿಟಿಡಿ) ವಕ್ತಾರೊಬ್ಬರು ತಿಳಿಸಿದರು.

ಪ್ರಾಂತ್ಯದ ಹರ್ನೈ ಜಿಲ್ಲೆಯಲ್ಲಿ ಮತ್ತೊಂದು ಶೋಧ ಕಾರ್ಯಾಚರಣೆ ಕೈಗೊಂಡ ವೇಳೆ ಭದ್ರತಾ ಪಡೆಗಳು ಬಲೂಚಿಸ್ತಾನ ಲಿಬರೇಶನ್‌ ಆರ್ಮಿ (ಬಿಎಲ್‌ಎ) ಕಮಾಂಡರ್‌ ಸೇರಿದಂತೆ ಆರು ಉಗ್ರರನ್ನು ಹೊಡೆದುರುಳಿಸಿದೆ.

ADVERTISEMENT

ಹತ್ಯೆಯಾದ ಒಂಬತ್ತು ಉಗ್ರರು ಬಿಎಲ್‌ಎ, ಬಲೂಚ್‌ ಲಿಬರೇಶನ್‌ ಫ್ರಂಟ್‌ ಮತ್ತು ಯುನೈಟೆಡ್‌ ಬಲೂಚ್‌ ಆರ್ಮಿ ಸಂಘಟನೆಗಳಿಗೆ ಸೇರಿದವರು. ಅವರು ರೋಶಿಯ ಮಸ್ತುಂಗ್‌ ಪರ್ವತ ಪ್ರದೇಶದಲ್ಲಿ ಅಡಗಿದ್ದರು ಎಂದು ಸಿಟಿಡಿ ವಕ್ತಾರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.