ADVERTISEMENT

ಪಾಕ್‌ನಲ್ಲಿ ಬಿಸಿಗಾಳಿ ತೀವ್ರ: ಪಂಜಾಬ್ ಪ್ರಾಂತ್ಯದಲ್ಲಿ 50°C ಡಿಗ್ರಿ ತಾಪ‍ಮಾನ

ಪಿಟಿಐ
Published 11 ಜೂನ್ 2025, 14:24 IST
Last Updated 11 ಜೂನ್ 2025, 14:24 IST
<div class="paragraphs"><p>ಪಾಕ್‌ನಲ್ಲಿ ಬಿಸಿಗಾಳಿ ತೀವ್ರ</p></div>

ಪಾಕ್‌ನಲ್ಲಿ ಬಿಸಿಗಾಳಿ ತೀವ್ರ

   

ಲಾಹೋರ್: ಪಾಕಿಸ್ತಾನದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಪಂಜಾಬ್‌ ಪ್ರಾಂತ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಎಂದು ಹವಾಮಾನ ಇಲಾಖೆ ಬುಧವಾರ ಹೇಳಿದೆ.

ಮುಂದಿನ 48 ರಿಂದ 72 ಗಂಟೆಯವರೆಗೆ ಬಿಸಿಗಾಳಿ ಸ್ಥಿತಿ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.

ADVERTISEMENT

ಭಕ್ಕರ್, ಹಫಿಜಾಬಾದ್‌ ಸೇರಿ ಹಲವು ಜಿಲ್ಲೆಗಳಲ್ಲಿ ಸರಾಸರಿ ತಾಪಮಾನ 48 ರಿಂದ 49 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಪಾದರಸ ಮಟ್ಟ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ತಾಪಮಾನವು ಸಾಮಾನ್ಯಕ್ಕಿಂತ 5 ರಿಂದ 7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಜೂನ್‌ 13ರವರೆಗೂ ಸುಡುಬಿಸಿಲು ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ಪ್ರಾಂತ್ಯದ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಸಾಕಷ್ಟು ದ್ರವ ಪದಾರ್ಥದ ಆಹಾರ ಸೇವಿಸಿ, ಆರೋಗ್ಯ ಸಮಸ್ಯೆ ಇರುವವರು, ಮಕ್ಕಳು ಅನಗತ್ಯವಾಗಿ ಮನೆಯಿಂದ ಹೊರಗೆ ತಿರುಗಾಡಬೇಡಿ ಎಂದು ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.