ADVERTISEMENT

ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಶೈಲೇಶ್ ಕಮಾಂಡರ್

​ಪ್ರಜಾವಾಣಿ ವಾರ್ತೆ
Published 25 ಮೇ 2019, 17:35 IST
Last Updated 25 ಮೇ 2019, 17:35 IST
ಶೈಲೇಶ್‌ ತಿನೇಕರ್‌
ಶೈಲೇಶ್‌ ತಿನೇಕರ್‌   

ವಿಶ್ವಸಂಸ್ಥೆ: ದಕ್ಷಿಣ ಸುಡಾನ್‌ನಲ್ಲಿ ಕಾರ್ಯಾಚರಿಸುತ್ತಿರುವ ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಯ ಕಮಾಂಡರ್‌ ಆಗಿ ಭಾರತದಲೆಫ್ಟಿನೆಂಟ್‌ ಜನರಲ್‌ ಶೈಲೇಶ್‌ ತಿನೇಕರ್‌ ನೇಮಕಗೊಂಡಿದ್ದಾರೆ.

ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆ್ಯಂಟನಿಯೋ ಗುಟೆರಸ್ ಶುಕ್ರವಾರ ಆದೇಶ ಹೊರಡಿಸಿದ್ದು, ಇದೇ 26ರಿಂದ ಶೈಲೇಶ್ ಕಾರ್ಯಪಡೆಯನ್ನು ಮುನ್ನಡೆಸಲಿದ್ದಾರೆ ಎಂದು ವಿಶ್ವಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಭಾರತೀಯ ಸೇನಾಪಡೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಅವರು ಇದೀಗ ಶಾಂತಿಪಡೆಯ 16 ಸಾವಿರ ಸೈನಿಕರ ನೇತೃತ್ವ ವಹಿಸಲಿದ್ದಾರೆ. ಈ ಪಡೆಯಲ್ಲಿ 2,400 ಭಾರತೀಯ ಸೈನಿಕರೂ ಇದ್ದಾರೆ.

ADVERTISEMENT

ಜಿತೇಂದ್ರಗೆ ‘ಡ್ಯಾಗ್‌ ಹಮ್ಮರ್‌ಸ್ಕೊಲ್ಡ್’ ಗೌರವ

ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌ ಅವರಿಗೆ ವಿಶ್ವಸಂಸ್ಥೆ ಮರಣೋತ್ತರ ಡೇಗ್‌ ಹಮ್ಮರ್‌ಸ್ಕೊಲ್ಡ್ ಪ್ರಶಸ್ತಿ ನೀಡಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಪ್ರಶಸ್ತಿಯನ್ನು ಶುಕ್ರವಾರ ಜಿತೇಂದ್ರ ಕುಟುಂಬದ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದರು.

ವಿಶ್ವಸಂಸ್ಥೆಯ ಎರಡನೇ ಮಹಾ ಕಾರ್ಯದರ್ಶಿ ಡ್ಯಾಗ್‌ ಹಮ್ಮರ್‌ಸ್ಕೊಲ್ಡ್ 1961ರಲ್ಲಿ ಕಾಂಗೊದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಹೆಸರಿನಲ್ಲಿ ವಿಶ್ವಸಂಸ್ಥೆ ಪ್ರಶಸ್ತಿ ಸ್ಥಾಪಿಸಿದ್ದು ಹುತಾತ್ಮರಾದ ಶಾಂತಿಪಾಲನಾ ಕಾರ್ಯಪಡೆಯ ಸೈನಿಕರಿಗೆ ನೀಡುತ್ತಿದೆ. 1948ರಿಂದ ಇದುವರೆಗೆ ವಿವಿಧ ದೇಶಗಳ 3,800 ಮಂದಿ ಶಾಂತಿಪಾಲನಾ ಪಡೆಯ ಸೈನಿಕರು ಮತ್ತು ಅಧಿಕಾರಿಗಳನ್ನು ವಿಶ್ವಸಂಸ್ಥೆ ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.