ADVERTISEMENT

ಇಂಡೊನೇಷ್ಯಾ: ಸಲಿಂಗಕಾಮಿಗಳಿಗೆ ಚಡಿಯೇಟು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 13:12 IST
Last Updated 24 ಫೆಬ್ರುವರಿ 2025, 13:12 IST
   

ಬಂದಾ ಆಚೆ: ಇಂಡೊನೇಷ್ಯಾದ ಸಂಪ್ರದಾಯವಾದಿ ‘ಆಚೆ’ ಪ್ರಾಂತ್ಯದ ಇಸ್ಲಾಮಿಕ್ ಷರಿಯಾ ನ್ಯಾಯಾಲಯವು, ಸಲಿಂಗಕಾಮಿಗಳಿಬ್ಬರಿಗೆ ಸಾರ್ವಜನಿಕವಾಗಿ ಚಡಿಯೇಟಿನ ಶಿಕ್ಷೆ ವಿಧಿಸಿದೆ.

24 ವಯಸ್ಸಿನ ಹಾಗೂ 18 ವಯಸ್ಸಿನ ವಿದ್ಯಾರ್ಥಿಗಳಿಬ್ಬರು ಸಲಿಂಗಕಾಮಿ ಲೈಂಗಿಕತೆ ಹೊಂದಿದ್ದಾರೆ ಎಂಬುದು ಸಾಬೀತಾಗಿದ್ದರಿಂದ, ಈ ಇಬ್ಬರಿಗೂ ಕ್ರಮವಾಗಿ 85, 80 ಚಡಿ ಏಟುಗಳನ್ನು ಸಾರ್ವಜನಿಕವಾಗಿ ನೀಡಬೇಕು ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ಸಲಿಂಗ ಸಂಬಂಧ ಹೊಂದಿದ್ದಾರೆ ಎಂಬ ಆರೋಪದಡಿ ಈ ಇಬ್ಬರನ್ನೂ ಕಳೆದ ನ. 7ರಂದು ಬಂಧಿಸಲಾಗಿತ್ತು.

ADVERTISEMENT

ಪ್ರಾಂತೀಯ ರಾಜಧಾನಿ ಬಂದಾ ಆಚೆಯಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ಈ ಇಬ್ಬರೂ ವಾಸವಿದ್ದರು. ಸಲಿಂಗಕಾಮ ಹೊಂದಿದ್ದಾರೆ ಎಂಬ ಅನುಮಾನದಿಂದ ನೆರೆಯವರು ಇವರ ಕೊಠಡಿಗೆ ನುಗ್ಗಿದಾಗ, ಯುವಕರು ಬೆತ್ತಲೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.