ಸಿಂಗಪುರ: ‘ಅಮೆರಿಕದ ಸುಂಕ ಏರಿಕೆಯು ಭಾರತದ ಮೇಲೆ ಪರಿಣಾಮ ಬೀರಿದ್ದು, ಅನೇಕ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಶುಕ್ರವಾರ ಹೇಳಿದ್ದಾರೆ.
ಕ್ರೆಡಾಯ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸೂರತ್‌ನಲ್ಲಿ ರತ್ನಗಳು ಹಾಗೂ ಆಭರಣಗಳ ವ್ಯಾಪಾರ, ಸಾಗರೋತ್ಪನ್ನ ಹಾಗೂ ತಯಾರಿಕಾ ವಲಯದಲ್ಲಿ 1.35 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸುಂಕ ಏರಿಕೆಯ ಪರಿಣಾಮವನ್ನು ತಗ್ಗಿಸಬೇಕಾದರೆ ರಪ್ತು ಮಾರುಕಟ್ಟೆಯನ್ನು ವೈವಿಧ್ಯಮಯಗೊಳಿಸಬೇಕು’ ಎಂದು ಸಲಹೆ ನೀಡಿದ್ದಾರೆ.
‘ಡೊನಾಲ್ಡ್ ಟ್ರಂಪ್ ಚಂಚಲ ಸ್ವಭಾವದ ವ್ಯಕ್ತಿ. ಅಮೆರಿಕದ ವ್ಯವಸ್ಥೆಯು ಅಧ್ಯಕ್ಷರಿಗೆ ಅದ್ಭುತ ಸ್ವಾತಂತ್ರ್ಯವನ್ನು ನೀಡುತ್ತದೆ. ಅವರಿಗಿಂತ ಮುನ್ನ 45 ಮಂದಿ ಅಧ್ಯಕ್ಷರು ಆಡಳಿತ ನಡೆಸಿದ್ದಾರೆ. ಆದರೆ, ಈ ರೀತಿಯ ವರ್ತನೆಯ ಅಧ್ಯಕ್ಷರನ್ನು ಯಾರೂ ನೋಡಿಲ್ಲ’ ಎಂದಿದ್ದಾರೆ.
‘ತಾನು ನೊಬೆಲ್ ಶಾಂತಿ ಪುರಸ್ಕಾರ ಅರ್ಹನೆಂದು ಜಗತ್ತಿನ ಯಾವುದೇ ನಾಯಕ ಹೇಳಿದ್ದನ್ನು ಕೇಳಿದ್ದೀರಾ?’ ಎಂದು ತರೂರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.