ADVERTISEMENT

ಪದಚ್ಯುತ ಪಿಎಂ ಹಸೀನಾ ಸೇರಿ 50 ಜನರ ಬಂಧನಕ್ಕೆ ವಾರಂಟ್ ಹೊರಡಿಸಿದ ಬಾಂಗ್ಲಾ ಕೋರ್ಟ್

ಪಿಟಿಐ
Published 13 ಏಪ್ರಿಲ್ 2025, 11:53 IST
Last Updated 13 ಏಪ್ರಿಲ್ 2025, 11:53 IST
<div class="paragraphs"><p>ಶೇಖ್‌ ಹಸೀನಾ</p></div>

ಶೇಖ್‌ ಹಸೀನಾ

   

-ಪಿಟಿಐ ಚಿತ್ರ

ಢಾಕಾ: ಪದಚ್ಯುತ ಪ್ರಧಾನಿ ಶೇಕ್‌ ಹಸೀನಾ, ಅವರ ಸಹೋದರಿ ಶೇಕ್‌ ರೆಹನಾ, ಬ್ರಿಟಿಷ್‌ ಸಂಸದ ತುಲಿಪ್‌ ರಿಜ್ವಾನಾ ಸಿದ್ದಿಕ್‌ ಹಾಗೂ ಇತರ 50 ಮಂದಿಯ ವಿರುದ್ಧ ಬಾಂಗ್ಲಾದೇಶ ನ್ಯಾಯಾಲಯ ಬಂಧನ ವಾರೆಂಟ್‌ ಹೊರಡಿಸಿದೆ.

ADVERTISEMENT

ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಮಿ ಸ್ವಾಧೀನಪಡಿಸಿಕೊಂಡ ಆರೋಪದಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಸಲ್ಲಿಸಿದ್ದ ಮೂರು ಪ್ರತ್ಯೇಕ ದೋಷಾರೋಪ ಪಟ್ಟಿಗಳನ್ನು ಪರಿಗಣಿಸಿ ಮೆಟ್ರೋಪಾಲಿಟನ್‌ ಹಿರಿಯ ವಿಶೇಷ ನ್ಯಾಯಾಧೀಶ ಝಾಕಿರ್‌ ಹುಸೇನ್‌ ಅವರು ಈ ಆದೇಶ ಹೊರಡಿಸಿದ್ದಾರೆ ಎಂದು 'ಢಾಕಾ ಟ್ರಿಬ್ಯೂನ್‌' ಪತ್ರಿಕೆ ವರದಿ ಮಾಡಿದೆ.

ಬಂಧನ ಆದೇಶಗಳ ಜಾರಿಗೆ ಸಂಬಂಧಿಸಿದ ವರದಿಗಳ ಪರಿಶೀಲನೆಯನ್ನು ಏಪ್ರಿಲ್‌ 27ಕ್ಕೆ ನಿಗದಿಪಡಿಸಲಾಗಿದೆ ಎಂದು ಎಸಿಸಿ ಸಹಾಯಕ ನಿರ್ದೇಶಕ ಅಮಿನುಲ್‌ ಇಸ್ಲಾಂ ಅವರು ತಿಳಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಂಧನ ಆದೇಶಗಳ ಅನುಷ್ಠಾನದ ಕುರಿತ ವರದಿಗಳನ್ನು ಪರಿಶೀಲಿಸಲು ನ್ಯಾಯಾಧೀಶ ಹೊಸೇನ್ ಏಪ್ರಿಲ್ 27 ಅನ್ನು ನಿಗದಿಪಡಿಸಿದ್ದಾರೆ ಎಂದು ಎಸಿಸಿ ಸಹಾಯಕ ನಿರ್ದೇಶಕ (ಪ್ರಾಸಿಕ್ಯೂಷನ್) ಅಮಿನುಲ್ ಇಸ್ಲಾಂ ತಿಳಿಸಿರುವುದಾಗಿಯೂ ವರದಿಯಲ್ಲಿದೆ.

ನಿವೇಶನ ಹಂಚಿಕೆಯಲ್ಲಿ ಅಕ್ರಮಗಳು ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ 53 ಜನರ ವಿರುದ್ಧ ಮೂರು ಪ್ರತ್ಯೇಕ ದೋಷಾರೋಪಗಳನ್ನು ಎಸಿಸಿ ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಹಸೀನಾ ಸೇರಿದಂತೆ 53 ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಬೆಂಗಾಳಿ ಪತ್ರಿಕೆ 'Prothom Alo' ಎಂದು ವರದಿ ಮಾಡಿದೆ.

ರಾಜುಕ್‌ ನಿವೇಶನ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಹಸೀನಾ, ಅವರ ಪುತ್ರಿ ಸೈಮಾ ವಾಜೆದ್‌ ಪುತುಲ್‌ ಹಾಗೂ ಇತರ 17 ಆರೋಪಿಗಳ ವಿರುದ್ಧ ಇದೇ ನ್ಯಾಯಾಲಯ ಏಪ್ರಿಲ್‌ 10ರಂದು ಬಂಧನ ವಾರೆಂಟ್‌ ಹೊರಡಿಸಿತ್ತು.

ಸೈಮಾ, ನವದೆಹಲಿಯಲ್ಲಿರುವ ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾ ಪ್ರಾದೇಶಿಕ ಸಂಸ್ಥೆಯ ನಿರ್ದೇಶಕಿಯಾಗಿ 2023ರ ನವೆಂಬರ್‌ 1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ಬಾಂಗ್ಲಾದೇಶದಾದ್ಯಂತ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಹೀಗಾಗಿ, 16 ವರ್ಷಗಳಿಂದ ಪ್ರಧಾನಿಯಾಗಿದ್ದ ಹಸೀನಾ ಅವರ ಅವಾಮಿ ಲೀಗ್‌ ಸರ್ಕಾರ 2024ರ ಆಗಸ್ಟ್‌ 5ರಂದು ಪತನಗೊಂಡಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಸೀನಾ, ದೇಶದಿಂದ ಪಲಾಯನ ಮಾಡಿದ್ದಾರೆ. ಅದಾದ ಬಳಿಕ, ಕೊಲೆ, ಇತರ ಅಪರಾಧ ಪ್ರಕರಣಗಳು, ಭ್ರಷ್ಟಾಚಾರ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.