ಸೈಬರ್ ದಾಳಿ
ಸಿಂಗಾಪುರ: ಚೀನಾ ಮೂಲದ ಸೈಬರ್ ದಾಳಿಯನ್ನು ದೇಶವು ಗಂಭೀರವಾಗಿ ಎದುರಿಸುತ್ತಿದೆ ಎಂದು ರಾಷ್ಟ್ರೀಯ ಭದ್ರತಾ ಸಚಿವ ಕೆ. ಷಣ್ಮುಗಂ ಹೇಳಿದ್ದಾರೆ.
ಚೀನಾ ಹ್ಯಾಕರ್‌ಗಳು ನಿರಂತರವಾಗಿ ಬೆದರಿಕೆ (ಎಪಿಟಿ) ಹೊಡ್ಡುತ್ತಿದ್ದಾರೆ. ಇದು ದೇಶಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ.
2021 ಮತ್ತು 2024ರ ನಡುವೆ ಚೀನಾ ಸೈಬರ್ ದಾಳಿಯು ನಾಲ್ಕುಪಟ್ಟು ಹೆಚ್ಚಾಗಿದೆ. ಮೂಲಸೌಕರ್ಯ, ರಾಷ್ರೀಯ ಭದ್ರತೆಗೆ ಹೆಚ್ಚು ಅಪಾಯ ಎಂದು ಸಚಿವರು ಹೇಳಿದ್ದಾರೆ.
ಚೀನಾದ ಹ್ಯಾಕರ್‌ಗಳು UNC3886 ಎಂಬ ಕುತಂತ್ರಾಂಶದ ಮೂಲಕ ದಾಳಿ ಮಾಡುತ್ತಿದ್ದಾರೆ ಎಂಬುದನ್ನು ಗೂಗಲ್‌ನ ಸೈಬರ್ ಸೆಕ್ಯುರಿಟಿ ಸಂಸ್ಥೆ ಮ್ಯಾಂಡಿಯಂಟ್ ತಿಳಿಸಿದೆ. ಈ ಹ್ಯಾಕರ್‌ಗಳು ಚೀನಾ ಸರ್ಕಾರದ ಗೂಢಚಾರರು ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.